ಹತ್ರಸ್| ನಿರ್ದಯಿ ಸರಕಾರ ಅವಳನ್ನು ಕೊಂದಿತು- ಸೋನಿಯಾ ಗಾಂಧಿ

0
740

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.1: ಹತ್ರ‌ಸ್‍ನಲ್ಲಿ ದಲಿತ ಯುವತಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಘಟನೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಉತ್ತರ ಪ್ರದೇಶ ಸರಕಾರವನ್ನು ಕಟುವಾಗಿ ಟೀಕಿಸಿದ್ದಾರೆ. ‘ಬಾಲಕಿಯನ್ನು ನಿರ್ದಯಿ ಸರಕಾರ ಕೊಲೆ ಮಾಡಿತೆಂದು ಅವರು ಹೇಳಿದರು. ಟ್ವಿಟ್ಟರ್‌ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡುವ ಮೂಲಕ ಅವರು ಪ್ರತಿಕ್ರಿಯೆ ನೀಡಿದರು.

ಬಾಲಕಿಯನ್ನು ನಿರ್ದಯವಾಗಿ ಸರಕಾರ ಕೊಲೆ ಮಾಡಿದೆ. ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವೂ ನಡೆಯುತ್ತಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ಬಾಲಕಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಬಾಲಕಿ ಈಗ ನಮ್ಮೊಂದಿಗಿಲ್ಲ. ಹತ್ರ‌ಸ್‍ನ ನಿರ್ಭಯಾ ಮೃತಪಟ್ಟಿಲ್ಲ ಎಂದು ನಾನು ಹೇಳುತ್ತೇನೆ. ಅವಳನ್ನು ನಿರ್ದಯವಾಗಿ ಸರಕಾರದ ಆಡಳಿತ ವ್ಯವಸ್ಥೆ ಕೊಲೆ ಮಾಡಿದೆ ಎಂದು ಸೋನಿಯಾ ಗಾಂಧಿ ಹೇಳಿದರು.

ಯುವತಿಯ ಮೃತದೇಹವನ್ನು ಪೊಲೀಸರು ಬಲವಂತದಿಂದ ಅನಾಥೆಯ ರೀತಿಯಲ್ಲಿ ಸಂಸ್ಕರಿಸಿದ್ದಾರೆ. ಮರಣದ ನಂತರವೂ ಅವಳನ್ನು ಅಪಮಾನಿಸಲಾಗಿದೆ ಎಂದು ಸೋನಿಯ ಹೇಳಿದರು.

ಚಿಕಿತ್ಸೆಯಲ್ಲಿದ್ದ ಸಂತ್ರಸ್ತೆ ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ನಂತರ ಪೊಲೀಸರೇ ಅವಳ ಮೃತದೇಹ ಸಂಸ್ಕಾರ ನಡೆಸಿದ್ದಾರೆ. ಕುಟುಂಬದ ವಿರೋಧವನ್ನು ಕಡೆಗಣಿಸಿ ಮಧ್ಯರಾತ್ರೆಯಲ್ಲಿ ಮೃತದೇಹ ಸಂಸ್ಕರಣೆ ಕಾರ್ಯ ನಡೆಯಿತು. ಪೊಲೀಸರು ಮತ್ತು ಉತ್ತರ ಪ್ರದೇಶ ಸರಕಾರದ ವರ್ತನೆಯ ವಿರುದ್ಧ ಪ್ರತಿಭಟನೆ ಉಗ್ರ ಸ್ವರೂಪಕ್ಕೆ ಹೊರಳಿದೆ.