ಯೋಗಿಗೆ ಆಡಳಿತ ಗೊತ್ತಿಲ್ಲ; ಕೇಂದ್ರ ಸರಕಾರ ಅವರನ್ನು ಮಠಕ್ಕೆ ಕಳುಹಿಸಲಿ- ಮಾಯಾವತಿ

0
747

ಸನ್ಮಾರ್ಗ ವಾರ್ತೆ

ಲಕ್ನೊ,ಅ.1: ಮಹಿಳೆಯರಿಗೆ ಸುರಕ್ಷೆ ನೀಡಲು ಸಾಧ್ಯವಿಲ್ಲದಿದ್ದರೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕೆಂದು ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಹೇಳಿದರು.

ಉತ್ತರ ಪ್ರದೇಶದಲ್ಲಿ ಮಹಿಳೆಯರ ವಿರುದ್ಧ ಅಪರಾಧ ನಡೆಯದ ದಿನಗಳಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆಯನ್ನು ಪರಿಪಾಲಿಸಲು ಯೋಗಿ ಆದಿತ್ಯನಾಥ್‍ರಿಂದ ಸಾಧ್ಯವಿಲ್ಲ.

ಯೋಗಿಯನ್ನು ಅವರ ಸ್ಥಳವಾದ ಗೋರಕ್‍ನಾಥ್ ಮಠಕ್ಕೆ ಕಳುಹಿಸಬೇಕೆಂದು ತಾನು ಕೇಂದ್ರ ಸರಕಾರವನ್ನು ಆಗ್ರಹಿಸುತ್ತೇನೆ. ಅವರಿಗೆ ಮಂದಿರ ಇಷ್ಟವಿಲ್ಲದಿದ್ದರೆ ರಾಮಮಂದಿರ ಕಟ್ಟಿಸುವ ಹೊಣೆಗಾರಿಕೆ ನೀಡಬೇಕೆಂದು ಮಾಯಾವತಿ ಹೇಳಿದರು.