ಸನ್ಮಾರ್ಗ ವಾರ್ತೆ
ಶ್ರೀನಗರ ಅ.30: ಜಮ್ಮು-ಕಾಶ್ಮೀರದ ಮೂವರು ಬಿಜೆಪಿ ಕಾರ್ಯಕರ್ತರನ್ನು ಗುಂಡಿಟ್ಟು ಸಾಯಿಸಿದ ಪ್ರಕರಣದ ಜವಾಬ್ದಾರಿಕೆಯನ್ನು ದಿ ರೆಸಿಸ್ಟನ್ಸ್ ಫ್ರಂಟ್(ಟಿಆರ್ಎಫ್) ವಹಿಸಿಕೊಂಡಿದೆ. ಇದು ಲಷ್ಕರೆ ತಯ್ಯಿಬದೊಂದಿಗೆ ಸಂಬಂಧ ಹೊಂದಿದೆ ಎನ್ನಲಾದ ಭಯೋತ್ಪಾದಕ ಸಂಘಟನೆಯಾಗಿದೆ.
ಕುಲ್ಗಾಂ ಜಿಲ್ಲೆಯಲ್ಲಿ ಗುರುವಾರ ರಾತ್ರೆ ಘಟನೆ ನಡೆದಿತ್ತು. ಯುವಮೋರ್ಚ ಪ್ರಧಾನ ಕಾರ್ಯದರ್ಶಿ ಫಿದ ಹುಸೈನ್, ಉಮರ್ ರಂಝಾನ್ ಹನ್, ಉಮರ್ ರಾಷಿದ್ ಬೀಗ್ ಕೊಲೆಯಾದ ಬಿಜೆಪಿ ಕಾರ್ಯಕರ್ತರು.
ಮೂವರು ಬಿಜೆಪಿ ಕಾರ್ಯಕರ್ತರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಡಿನ ಸುರಿಮಳೆ ನಡೆದಿತ್ತು. ಘಟನೆಯಲ್ಲಿ ಮೂವರು ಮೃತಪಟ್ಟಿದ್ದರು.












