ಸನ್ಮಾರ್ಗ ವಾರ್ತೆ
ಬೆಂಗಳೂರು: ದೇಶದ ಜನರಿಗೆ ಸುಳ್ಳು ಭರವಸೆಗಳನ್ನು ಕೊಡುತ್ತಿರುವ ಕೇಂದ್ರ ಸರಕಾರ ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸುತ್ತಿದೆ ಎಲ್ಪಿಜಿ ದರ ಏರಿಕೆ ನಿರ್ಧಾರವನ್ನು ಕೇಂದ್ರ ಸರಕಾರ ಈ ಕೂಡಲೇ ವಾಪಸ್ ಪಡೆಯಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.
ಕೇಂದ್ರದ ತೈಲ ಬೆಲೆ ಏರಿಕೆಯನ್ನು ಗ್ರಾಹಕರಿಗೆ ದರ ಏರಿಕೆಯನ್ನು ಖಂಡಿಸಿದ ಎರಡು ವಾರಗಳ ಹಿಂದಷ್ಟೇ ಗೃಹಬಳಕೆ ಎಲ್ಪಿಜಿ ಸಿಲಿಂಡರ್ ದರವನ್ನು 50 ರೂಪಾಯಿಯಷ್ಟು ಏರಿಕೆ ಮಾಡಿದ ಕೇಂದ್ರ ಸರ್ಕಾರ ಇದೀಗ ಮತ್ತೆ ಗ್ರಾಹಕರಿಗೆ ದರ ಏರಿಕೆಯ ಬರೆ ಎಳೆದಿದೆ. ಅಡುಗೆ ಅನಿಲ ಸಿಲಿಂಡರ್ ದರವನ್ನು ಮತ್ತೆ 50 ರೂಪಾಯಿಗೆ ಏರಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಂದೇ ತಿಂಗಳ ಅವಧಿಯಲ್ಲಿ ಎರಡನೇ ಭಾರಿ ಅಡುಗೆ ಇಂಧನದ ಬೆಲೆ 50 ರೂ. ಏರಿಸಲಾಗಿದೆ.ಮತ್ತೊಂದೆಡೆ ಇಂಧನ ತೈಲಗಳ ಬೆಲೆ ನಿರಂತರ ಏರಿಕೆಯಾಗುತ್ತಿದೆ.
ನರೇಂದ್ರ ಮೋದಿಯವರ ಸರ್ಕಾರ ದೇಶದ ಜನರಿಗೆ “ಪ್ಯಾಕೇಜ್” ಮಂಕುಬೂದಿ ಎರಚುತ್ತಾ ಜನರ ಪಾಕೆಟ್ ದೋಚುತ್ತಿದೆ. ಜನರ ಬದುಕಿನ ಸಮಾಧಿಯ ಮೇಲೆ ಸಾಮ್ರಾಜ್ಯ ಸ್ಥಾಪಿಸಲು ಹೊರಟಿದ್ದಾರೆ.
ಕೋವಿಡ್ ಸಂಕಷ್ಟದಲ್ಲಿರುವ ದೇಶದ ಜನರು ಉಸಿರಾಡುವಂತೆ ಮಾಡಬೇಕು. ಸಾಂಕ್ರಾಮಿಕ ದಿಂದ ಹಣಕಾಸು ಬಿಕ್ಕಟ್ಟು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಹಣದುಬ್ಬರ ಹೆಚ್ಚಳದಿಂದ ಈಗಾಗಲೇ ಜನಸಾಮಾನ್ಯರು ಕಂಗಾಲಾಗಿದ್ದು, ಬಿಜೆಪಿ ಸರ್ಕಾರ ಮತ್ತು ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.












