ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೊರೋನಾ ಬಂದ ಬಳಿಕ ದೇಶಾದ್ಯಂತ ಚರ್ಚೆಯಲ್ಲಿರುವ ವಿಷಯ ಕೊರೋನಾ ವ್ಯಾಕ್ಸಿನ್. ಚರ್ಚೆಯ ವಿಷಯವಾದ್ದರಿಂದ ಆರೋಗ್ಯ ಸಚಿವಾಲಯವು ಕೊರೋನಾ ಸಂಬಂಧ ದಾಖಲೆಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ(FAQ- Frequently Asked Questions) ನ ಪಟ್ಟಿಯಲ್ಲಿ ಕೋವಿಡ್ – 19 ಗೆ ವ್ಯಾಕ್ಸಿನೇಷನ್ ಸ್ವಯಂಪ್ರೇರಿತವಾಗಿದೆ” ಎಂದು ಹೇಳಿದೆ.
ಆದಾಗ್ಯೂ, ಕೋವಿಡ್ – 19 ಲಸಿಕೆಯ ಸಂಪೂರ್ಣ ವೇಳಾಪಟ್ಟಿಯನ್ನು ಪಡೆಯುವುದು ಸೂಕ್ತವಾಗಿದೆ. ಈ ಕಾಯಿಲೆಯ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ಕುಟುಂಬ ಸದಸ್ಯರು, ಸ್ನೇಹಿತರು, ಸಂಬಂಧಿಕರು ಮತ್ತು ಸಹೋದ್ಯೋಗಿಗಳು ಸೇರಿದಂತೆ ನಿಕಟ ಸಂಪರ್ಕಗಳಿಗೆ ಈ ರೋಗದ ಹರಡುವಿಕೆಯನ್ನು ಸೀಮಿತಗೊಳಿಸುವುದಕ್ಕಾಗಿ, ತೆಗೆದುಕೊಳ್ಳುವುದು ಒಳ್ಳೆಯದು ಎಂದು ಅಭಿಪ್ರಾಯ ಪಟ್ಟಿದೆ.
ಕೊರೋನಾ ವ್ಯಾಕ್ಸಿನೇಷನ್ ಅನ್ನು ಆರಂಭಿಕ ಹಂತದಲ್ಲಿ ಆದ್ಯತೆಯ ಮೇರೆಗೆ ಆರೋಗ್ಯ ಮತ್ತು ಫ್ರಂಟ್ ಲೈನ್ ಉದ್ಯೋಗಿಗಳಿಗೆ ನೀಡಲಾಗುವುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.












