ಕೇವಲ ಒಂದು ಡಾಲರ್ ಗೆ ಮಾರಾಟವಾಗಲಿರುವ ಬಿ.ಆರ್. ಶೆಟ್ಟಿ ಒಡೆತನದ ಕಂಪನಿ…!!!

0
1242

ಸನ್ಮಾರ್ಗ ವಾರ್ತೆ

ಯು.ಎ.ಇ: ಆರ್ಥಿಕ ನಷ್ಟಕ್ಕೊಳಗಾಗಿ ಸಂಕಷ್ಟಕ್ಕೆ ಈಡಾಗಿರುವ ಭಾರತೀಯ ಮೂಲದ ಅನಿವಾಸಿ ಉದ್ಯಮಿ ಬಿ.ಆರ್. ಶೆಟ್ಟಿಯವರ ಒಡೆತನದ ಕಂಪನಿಯು ಕೇವಲ ಒಂದು ಡಾಲರ್ ಅಂದರೆ ಭಾರತದ 74₹ ಗಳಿಗೆ ಮಾರಾಟವಾಗಲಿರುವುದಾಗಿ ವರದಿಯಾಗಿದೆ.

ತೊಂದರೆಗೊಳಗಾಗಿರುವ ಯುಎಇ ಮೂಲದ ರವಾನೆ ಮತ್ತು ವಿದೇಶಿ ವಿನಿಮಯ ಸಂಸ್ಥೆಯಾದ ಎನ್‌ಆರ್‌ಐ ಉದ್ಯಮಿ ಬಿ.ಆರ್.ಶೆಟ್ಟಿ ಒಡೆತನದಲ್ಲಿರುವ ಫಿನಬ್ಲರ್ ಕಂಪೆನಿಯು ತನ್ನ ಕಾರ್ಯಾಚರಣೆಯನ್ನು ಇಸ್ರೇಲ್‌ನ ಪ್ರಿಸ್ಮ್ ಗ್ರೂಪ್ ಎಜಿಯ ಅಂಗಸಂಸ್ಥೆಯಾದ ಗ್ಲೋಬಲ್ ಫಿನ್‌ಟೆಕ್ ಇನ್ವೆಸ್ಟ್‌ಮೆಂಟ್ಸ್ ಹೋಲ್ಡಿಂಗ್ ಎಜಿ (GFIH) ಗೆ ಸಂಸ್ಥೆಗೆ ಒಂದು ಡಾಲರ್ ಗೆ ಮಾರಾಟ ಮಾಡಲು ನಿರ್ಧರಿಸಿದೆ‌.

170 ದೇಶಗಳಲ್ಲಿ ವ್ಯಾಪಿಸಿದ್ದ ಬಿ.ಆರ್. ಶೆಟ್ಟಿ ನೇತೃತ್ವದ ಉದ್ಯಮದ ನೆಟ್‌ವರ್ಕ್ ಪರವಾನಗಿ ಪಡೆದ ಕಾರ್ಯಾಚರಣೆಗಳ ಮೂಲಕ 45 ರಾಷ್ಟ್ರಗಳಲ್ಲಿ ನೇರ ಉಪಸ್ಥಿತಿಯಲ್ಲಿ ಕಾರ್ಯಾಚರಣೆ ಮಾಡುತ್ತಿತ್ತು.
ಕಳೆದ ವರ್ಷದ ಡಿಸೆಂಬರ್ ವರೆಗೆ 2 ಬಿಲಿಯನ್ ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದ ಈ ಕಂಪನಿಯು ಕೇವಲ ಒಂದು ಡಾಲರ್ ಗೆ ಮಾರಾಟವಾಗುತ್ತಿದೆ.

ಈ ಒಪ್ಪಂದಕ್ಕಾಗಿ ಅಬುಧಾಬಿಯ ರಾಯಲ್ ಸ್ಟ್ರಾಟೆಜಿಕ್ ಪಾರ್ಟ್ನರ್ಸ್ (RSP) ಮಧ್ಯಸ್ಥಿಕೆ ವಹಿಸಿರುವುದಾಗಿ ತಿಳಿದು ಬಂದಿದೆ.