ಪುದಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿಗೆ ಸೀಟಿಲ್ಲ

0
570

ಸನ್ಮಾರ್ಗ ವಾರ್ತೆ

ಚೆನ್ನೈ: ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿಗೆ ಕಾಂಗ್ರೆಸ್ ಟಿಕೇಟು ನೀಡಿಲ್ಲ. ರಾಜ್ಯದ ಚುನಾವಣಾ ಪ್ರಕ್ರಿಯೆಗೆ ಅವರು ನೇತೃತ್ವ ನೀಡಲಿದ್ದಾರೆ ಎಂದು ಪುದುಚೇರಿ ಹೊಣೆಯಿರುವ ಎಐಸಿಸಿ ಉಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದರು.

ಕಾಂಗ್ರೆಸ್ 14 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಚುನಾವಣೆಯ ಸ್ವಲ್ಪ ಮೊದಲು ಕಾಂಗ್ರೆಸ್‍ನಿಂದ ಶಾಸಕರು ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರಿದ್ದರಿಂದ ರಾಜಕೀಯ ಬಿಕಟ್ಟು ತಲೆದೋರಿ ನಾರಾಯಣಸ್ವಾಮಿ ಸರಕಾರ ಬಹುಮತ ಕಳಕೊಂಡಿತ್ತು.

ನಂತರ ನಾರಾಯಣ ಸ್ವಾಮಿ ರಾಜೀನಾಮೆ ನೀಡಿದ್ದರು. ಪುದುಚೇರಿಯಲ್ಲಿ 30 ಶಾಸಕ ಸ್ಥಾನಗಳಿದ್ದು ಕಾಂಗ್ರೆಸ್ 15 ಸೀಟುಗಳಲ್ಲಿ ಸ್ಪರ್ಧಿಸುತ್ತಿದೆ. ಡಿಎಂಕೆ 13 ಸ್ಥಾನಗಳು ಮತ್ತು ವಿಡುದಲೈ ಚಿರತೆಗಳ್ ಪಕ್ಷ, ಸಿಪಿಐಗೆ ತಲಾ ಒಂದು ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.