ಸನ್ಮಾರ್ಗ ವಾರ್ತೆ
ಮಂಗಳೂರು: ಯುವ ಜನರ ಸಂಘಟನೆಯಾದ ಸಾಲಿಡಾರಿಟಿ ಯೂತ್ ಮೂಮೆಂಟ್ ನ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಫರ್ವೇಝ್ ಮುಹಮ್ಮದ್ ಆಯ್ಕೆಯಾಗಿದ್ದಾರೆ.
ಸಾಲಿಡಾರಿಟಿಯ ರಾಜ್ಯಾಧ್ಯಕ್ಷರಾದ ಲಬೀದ್ ಶಾಫಿಯವರ ನೇತೃತ್ವದಲ್ಲಿ ಬಂದರ್ ನ ಹಿದಾಯತ್ ಸೆಂಟರ್ ನಲ್ಲಿ ನಡೆದ ಸಭೆಯಲ್ಲಿ ಫರ್ವೇಝ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿಯಾಗಿ ನಿಝಾಮ್ ಉಳ್ಳಾಲರವರನ್ನು ಇದೇ ವೇಳೆ ಆಯ್ಕೆ ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಅಶ್ಫಾಕ್ ಅಹ್ಮದ್ ಶರೀಫ್, ಶೌಕತ್ ಅಲಿ, ಶಾಕಿರ್ ಅಹ್ಮದ್, ಕಬೀರ್ ಮಂಗಳೂರು, ರಿಯಾಝ್ ಪುತ್ತೂರು, ಮುಸ್ತಾಕ್ ಪಟ್ಲ, ಅಶೀರುದ್ದೀನ್ ಆಲಿಯಾ, ಜಾವೇದ್ ಅಖ್ತರ್, ಶಾಹಿದ್ ಉಪ್ಪಿನಂಗಡಿ, ಮುನೀಬ್ ಪಾಣೆಮಂಗಳೂರು, ಇಮ್ತಿಯಾಝ್ ಕಲ್ಲಾಡಿ ಹಾಗೂ ಅಸ್ಲಂ ಪಂಜಾಳ ರವರನ್ನು ಆಯ್ಕೆ ಮಾಡಲಾಯಿತು.












