ಕೇರಳದ ನಂತರ ಪ.ಬಂಗಾಳದಲ್ಲಿಯೂ ಅನುಮತಿ ಕೇಳದೆ ಅಭ್ಯರ್ಥಿಗಳನ್ನು ನಿಲ್ಲಿಸಿದ ಬಿಜೆಪಿ; ಇಬ್ಬರು ಹಿಂದೆ ಸರಿದರು

0
839

ಸನ್ಮಾರ್ಗ ವಾರ್ತೆ

ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಜಾರಿಗೊಳಿಸಿದ್ದು ಇದರ ಬೆನ್ನಿಗೆ ಇಬ್ಬರು ಹಿಂದೆ ಸರಿದಿದ್ದಾರೆ. ತಮಗೆ ಗೊತ್ತಿಲ್ಲದೆ ತಮ್ಮನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ಅವರಿಬ್ಬರೂ ಕಾರಣ ನೀಡಿದ್ದಾರೆ.

ನಿಧನರಾದ ಕಾಂಗ್ರೆಸ್ ನಾಯಕ ಸೋಮನ್ ಮಿತ್ರರ ಪತ್ನಿ ಶಿಖಾ ಮಿತ್ರಾ ಹಿಂದೆ ಸರಿದ ಅಭ್ಯಥಿಗಳಲ್ಲಿ ಒಬ್ಬರು. ತೃಣಮೂಲ ಶಾಸಕಿ ಮಾಲಾ ಸಾಹರ ಪತಿ ತರುಣ್ ಶಾ ಇನ್ನೊಬ್ಬರು. ತರುಣ್ ಶಾರನ್ನು ಕಾಸಿಪುರ-ಬೆಲ್‍ಗಾಚಿಯಿಂದ ಮತ್ತು ಚೌರಿಕೆ ಕ್ಷೇತ್ರದಿಂದ ಶಿಖಾ ಮಿತ್ರ ರಿಗೆ ಬಿಜೆಪಿ ಟಿಕೇಟು ನೀಡಿತ್ತು.

ತನ್ನ ಅನುಮತಿಯಿಲ್ಲದೆ ಅಭ್ಯರ್ಥಿಯಾಗಿಸಿದ್ದೆಂದು ಬಿಜೆಪಿಗೆ ಸೇರಲು ಬಯಸಿಲ್ಲ ಎಂದು ಶಿಖಾ ಮಿತ್ರ ಹೇಳಿದರು. ತಾಯಿಯನ್ನು ವಿವಾದದಿಂದ ದೂರ ಇಡಿ ಎಂದು ಶಿಖಾರ ಪುತ್ರ ರೋಹನ್ ಮಿತ್ರ ಮನವಿ ಮಾಡಿದರು.

ಅನುಮತಿಯಿಲ್ಲದೆ ಅಭ್ಯರ್ಥಿಯಾಗಿಸಿದ್ದಾರೆ ತಾನೀಗಲೂ ತೃಣಮೂಲದ ಜೊತೆಗೆ ಇದ್ದೇನೆ ಎಂದು ತರುಣ್ ಶಾ ಹೇಳಿದರು. ಈ ಹಿಂದೆ ಕೇರಳದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು ವಯನಾಡಿನ ಮಾನಂದವಾಡಿಯಲ್ಲಿ ಮಣಿಕಂಠನ್ ಎಂಬವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಅವರು ಕೂಡ ಹಿಂದೆ ಸರಿದಿದ್ದಾರೆ.