ಸನ್ಮಾರ್ಗ ವಾರ್ತೆ
ತಿರುವನಂತಪುರಂ: ಕೇರಳದಲ್ಲಿ ಲವ್ ಜಿಹಾದ್ ಇಲ್ಲ ಎಂಬುದಾಗಿ ಕಾಂಗ್ರೆಸ್ ನಾಯಕ ಸಂಸದ ಡಾ.ಶಶಿ ತರೂರ್ ಹೇಳಿದ್ದಾರೆ. ಬಿಜೆಪಿಗೆ ಕೇರಳದಲ್ಲಿ ಎಷ್ಟು ಲವ್ ಜಿಹಾದ್ ಕೇಸುಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಕೋಮು ವಿಷವನ್ನು ಕಾರುವ ಪ್ರಚಾರ ಇದು. ಈ ವಿಷಯದಲ್ಲಿ ಕೇರಳೀಯರು ಕೆರಳಬಾರದು. ಕೋಮು ಆಧಾರಿತವಾಗಿ ನಾಡನ್ನು ವಿಭಜಿಸುವ ಪ್ರಚಾರ ತಂತ್ರ ಇದು. ಕಾಂಗ್ರೆಸ್ ಇದಕ್ಕೆ ಬೆಲೆ ಕೊಡುವುದಿಲ್ಲ ಎಂದು ತರೂರ್ ಹೇಳಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ರ ಕೋಮು ವಿಷ ಪ್ರಚಾರವನ್ನು ಜನರು ತಿರಸ್ಕರಿಸಬೇಕೆಂದು ಅವರು ಆಗ್ರಹಿಸಿದರು.
ಶಬರಿಮಲೆ ಮುಖ್ಯ ಚುನಾವಣಾ ವಿಷಯವಲ್ಲ. ಆದರೂ ಅದು ಪ್ರಧಾನ ವಿಷಯವೂ ಆಗಿದೆ. ವ್ಯಕ್ತಿಗಳ ಖಾಸಗಿ ಹಕ್ಕು ಧರ್ಮ ನಂಬಿಕೆ. ಆಚಾರ ಸಂರಕ್ಷಣೆಯು ನೆಹರೂರವರ ವಿಚಾರಧಾರೆಯೊಂದಿಗೆ ಹೊಂದಿಕೊಂಡು ಸಾಗುತ್ತದೆ ಎಂದು ತರೂರ್ ಬೆಟ್ಟು ಮಾಡಿದರು.












