ಸುವೆಂದು ಅಧಿಕಾರಿಗೂ ಹಣ ಪಾವತಿಸಿದ್ದೇನೆ. ಏಕೆ ಬಂಧನವಿಲ್ಲ: ನಾರದಾ ಸ್ಟಿಂಗ್ ದೂರುದಾರ ಮ್ಯಾಥ್ಯೂ ಸ್ಯಾಮ್ಯುಯೆಲ್ ಪ್ರಶ್ನೆ

0
737

ಸನ್ಮಾರ್ಗ ವಾರ್ತೆ

ನವದೆಹಲಿ: ತೃಣಮೂಲದ ಸುಬ್ರತಾ ಮುಖರ್ಜಿ ಮತ್ತು ಫರ್ಹಾದ್ ಹಕೀಮ್ ಅವರಂತಹ ಕೆಲವು ರಾಜಕಾರಣಿಗಳನ್ನು ನಾರದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಬಂಧಿಸಿರುವ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಕುಟುಕು ಕಾರ್ಯಾಚರಣೆಯ ಹಿರಿಯ ಪತ್ರಕರ್ತ ಮತ್ತು 2016 ರ ನಾರದ ಟೇಪ್ಸ್ ಪ್ರಕರಣದ ದೂರುದಾರ ಮ್ಯಾಥ್ಯೂ ಸ್ಯಾಮ್ಯುಯೆಲ್, ಸದ್ಯ ಬಿಜೆಪಿಯಲ್ಲಿರುವ ಸುವೆಂದು ಅಧಿಕಾರಿ, ಮುಕುಲ್ ರಾಯ್ ಕೂಡ ಹಣ ಮಾಡಿದ್ದಾರೆ. ಅವರನ್ನು ಏಕೆ ಬಂಧನ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕ ಸುವೆಂದು ಅಧಿಕಾರಿಯಂತಹ ಇತರರ ವಿರುದ್ಧ ಇದೇ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳು ಇದ್ದ ಹೊರತಾಗಿಯೂ ಯಾವುದೇ ಕ್ರಮ ಕೈಗೊಳ್ಳದ್ದು ಸರಿಯಲ್ಲ. ಆದ್ದರಿಂದ ನ್ಯಾಯಯುತವಾದ ತನಿಖೆಯನ್ನು ಸಿಬಿಐ ನಡೆಸಬೇಕೆಂದು ಆಗ್ರಹಿಸಿದ್ದಾರೆ.

“ಇದು ಸಂತೋಷದ ದಿನ. ಪ್ರಕರಣ ನಡೆದು ಇದು ವರ್ಷಗಳಾಗಿವೆ. ಸ್ಟಿಂಗ್ ಟೇಪ್‌ಗಳನ್ನು 2016 ರಲ್ಲಿ ಬಿಡುಗಡೆ ಮಾಡಿದ್ದೆವು. ಮೂರು ವರ್ಷಗಳ ಹಿಂದೆ ಚಾರ್ಜ್‌ಶೀಟ್ ಸಿದ್ಧವಾಗಿತ್ತಾದರೂ ರಾಜಕಾರಣಿಗಳನ್ನು ಈ ವರೆಗೆ ಸಿಬಿಐ ಮುಟ್ಟಿರಲಿಲ್ಲ ” ಎಂದು ತನಿಖಾ ಪತ್ರಕರ್ತ ಸ್ಯಾಮ್ಯುಯೆಲ್ ಮತ್ತು ನಾರದ ನ್ಯೂಸ್ ಸಂಸ್ಥಾಪಕ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.