ಇಸ್ರೇಲ್ ದಾಳಿಯಲ್ಲಿ ಕಟ್ಟಡದಡಿಗೆ ಬಿದ್ದರೂ ಪವಾಡ ಸದೃಶವಾಗಿ ಬದುಕುಳಿದ ಪ್ಯಾಲೆಸ್ತೀನ್ ಬಾಲಕಿ

0
817

ಸನ್ಮಾರ್ಗ ವಾರ್ತೆ

ಜೆರುಸಲೇಂ: ತಾಯಿ ಮತ್ತು ನಾಲ್ವರು ಸಹೋದರರೊಂದಿಗೆ ನಿದ್ರಿಸುತ್ತಿದ್ದ ಆರು ವರ್ಷದ ಸೂಸಿ ಇಸ್ಕುಂದಾನಳ ಮನೆಯ ಮೇಲೆ ಇಸ್ರೇಲ್ ಬಾಂಬು ಸುರಿಸಿತು. ಆ ಕುಟುಂಬದ ಎಲ್ಲರೂ ಮೃತಪಟ್ಟಿದ್ದರು. ರಕ್ಷಣಾ ಕಾರ್ಯಕರ್ತರು ಅವಶೇಷಗಳಿಂದ ಒಂದೊಂದೇ ಮೃತದೇಹವನ್ನು ಹೊರತೆಗೆಯುತ್ತಿದ್ದಾಗ ಎಲ್ಲಿಂದಲೋ ಒಂದು ಅಳು ಕೇಳಿ ಬಂದು ಅವರನ್ನು ಎಚ್ಚರಿಸಿದೆ. ಆ ಮಗು ನಜ್ಜುಗುಜ್ಜಾದ ಕಟ್ಟಡದ ಅಡಿಯಲ್ಲಿ ಜೀವಂತವಾಗಿತ್ತು. ರಕ್ಷಣಾ ಕಾರ್ಯಕರ್ತರಿಗೆ ಅದೊಂದು ಆಶ್ಚರ್ಯದ ಸಂಗತಿಯಾಗಿತ್ತು. ಅವಳನ್ನು ಅವಶೇಷಗಳಡಿಯಿಂದ ರಕ್ಷಿಸಿ ಗಾಝದ ದೊಡ್ಡ ಆಸ್ಪತ್ರೆ ಅಲ್‍ಶಿಫಕ್ಕೆ ಕರೆತಂದಾಗ ಅವಳ ಹತ್ತಿರದಲ್ಲಿ ಗಾಯಗಳೊಂದಿಗೆ ಅವಳ ತಂದೆ ರಿಯಾದ್ ಇಸ್ಕುಂದಾನ ಬೊಬ್ಬೆ ಹೊಡೆಯುತ್ತಿದ್ದರು.

ಮಗುವನ್ನು ಕಂಡೊಡನೆ ತಂದೆ ಮುತ್ತಿಕ್ಕಿದರು. ನಂತರ ಮಗುವಿನೊಡನೆ ಕ್ಷಮೆ ಕೇಳಿದರು. ನಿನ್ನ ಅಳು ಕೇಳುತ್ತಿತ್ತು ಮಗಳೆ, ಬರುವ ದಾರಿಯೆಲ್ಲ ಮುಚ್ಚಿ ಹೋಗಿತ್ತು ಎಂದು ಆ ತಂದೆ ಹೇಳಿದರು. ರವಿವಾರ ಇವರಿದ್ದ ಕುಟುಂಬದ ಕಟ್ಟಡದ ಮೇಲೆ ಇಸ್ರೇಲ್ ಬಾಂಬು ಸುರಿಸಿದ ಪರಿಣಾಮ ಹತ್ತು ಮಕ್ಕಳ ಸಹಿತ 42 ಮಂದಿ ಮೃತಪಟ್ಟಿದ್ದಾರೆ. ಹಮಾಸ್ ನೆಲೆ ಎಂದು ಆರೋಪಿಸಿ ಕಟ್ಟಡಕ್ಕೆ ಇಸ್ರೇಲ್ ಬಾಂಬು ಹಾಕಿತ್ತು. ಆದರೆ ಅಮಾಯಕ ಪ್ಯಾಲೆಸ್ತೀನ್ ಜನರು ಮೃತಪಟ್ಟಿದ್ದಾರೆ.