ಸನ್ಮಾರ್ಗ ವಾರ್ತೆ
ಇಸ್ತಾಂಬುಲ್: ಟರ್ಕಿಯ ರಾಷ್ಟ್ರಪಿತ ಮುಸ್ತಫಾ ಕಮಾಲ್ ಅತಾತುರ್ಕಿ ಜಾತ್ಯತೀತತೆಯ ಪ್ರತೀಕವಾಗಿಸಿದ ತಕ್ಸಿಂ ಸ್ಕ್ವೇರ್‌ನಲ್ಲಿ ಹೊಸ ಮಸೀದಿಯನ್ನು ಟರ್ಕಿಯ ಅಧ್ಯಕ್ಷ ರಜತ್ ತಯ್ಯಿಬ್ ಉರ್ದುಗಾನ್ ತೆರೆದಿದ್ದಾರೆ. 1950ರಿಂದ ಮಸೀದಿ ಕಟ್ಟಿಸಲು ಹಲವು ಯತ್ನಗಳು ನಡೆದಿತ್ತು. ಆದರೆ ಅಂದು ಯಶಸ್ಸು ಸಿಕ್ಕಿರಲಿಲ್ಲ. ಈ ಶುಕ್ರವಾರ ಹೊಸ ಮಸೀದಿಯನ್ನು ವಿಶ್ವಾಸಿಗಳಿಗೆ ತೆರೆದು ಕೊಡಲಾಗಿದೆ.
2013ರಲ್ಲಿ ಮಸೀದಿ ನಿರ್ಮಾಣ ಕಾರ್ಯವನ್ನು ಸರಕಾರ ಆರಂಭಿಸಿತ್ತು. ಮೊದಲು ಇದರ ವಿರುದ್ಧ ಪ್ರತಿಭಟನೆಗಳ ನಡುವೆ ಮಸೀದಿ ಉದ್ಘಾಟನೆಯಾಗಿದೆ. ಸ್ಕ್ವೇರ್‌ನ ಸಮೀಪ ಅತಾತುರ್ಕ್ ಪ್ರತಿಮೆಯಿಂದ ಅನತಿ ದೂರದಲ್ಲಿ ಸುಂದರ ಶಿಲ್ಪಕಲಾ ಕುಸುರಿಯಿಂದ ಮಸೀದಿ ಎದ್ದು ನಿಂತಿದೆ.
ತಕ್ಸಿಂ ಸ್ಕ್ವೇರ್ ಇಸ್ತಾಂಬುಲ್‍ನ ವ್ಯಾಪಾರ, ಟೂರಿಸ್ಟ್‌ಗಳು, ಕಾರ್ಮಿಕರಿಂದ ಸೇರಿದ ಒಂದು ನಿಬಿಡ ಸ್ಥಳವಾಗಿದ್ದು ನಗರದ ಅತ್ಯಂತ ಪ್ರಾಚೀನ ಗ್ರೀಕ್ ಆರ್ಥೊಡಾಕ್ಸ್ ಚರ್ಚ್ ಹತ್ತಿರದಲ್ಲಿದೆ.
1990ರಲ್ಲಿ ಇಸ್ತಾಂಬುಲ್ ಮೇಯರ್ ಆದ ಕಾಲದಿಂದಲೂ ಇಲ್ಲಿ ಮಸೀದಿ ಕಟ್ಟಿಸಲು ಉರ್ದುಗಾನ್ ಶ್ರಮ ಆರಂಭಿಸಿದ್ದರು. 1997ರಲ್ಲಿ ಸೈನಿಕ ಮಧ್ಯಪ್ರವೇಶದಿಂದ ಯೋಜನೆಯನ್ನು ಮುಂದಕ್ಕೆ ಹಾಕಲಾಗಿತ್ತು. 2017ರಲ್ಲಿ ಪುನಃ ನಿರ್ಮಾಣ ಕಾಮಗಾರಿ ಶುರು ಮಾಡಲಾಯಿತು. ಮಸೀದಿಗೆ ಹೊಂದಿಕೊಂಡು ಪ್ರದರ್ಶನ ಹಾಲ್, ಲೈಬ್ರರಿ, ಸೂಪ್ ಕಿಚನ್, ಕಾರ್ ಪಾರ್ಕ್ ಇದೆ. ನಗರದಲ್ಲಿ ಉರ್ದುಗಾನ್ ಉದ್ಘಾಟಿಸಿದ ಮೂರನೆ ಮುಖ್ಯ ಮಸೀದಿ ಇದು. 2019ರಲ್ಲಿ ಕಾಮ್ಲಿಕ ಮಸೀದಿ ಮತ್ತು ಕಳೆದ ವರ್ಷ ಚರಿತ್ರ ಪ್ರಸಿದ್ಧ ಅಯೊ ಸೋಫಿಯ ಮಸೀದಿಯನ್ನು ಉರ್ದುಗಾನ್ ತೆರೆದು ಕೊಟ್ಟಿದ್ದರು.


Turkish century in a nutshell:
Ataturk monument” (1928) and “Erdogan mosque” (2021), at Taksim Square, Istanbul pic.twitter.com/GcnhNQe0w5
— Soner Cagaptay (@SonerCagaptay) May 27, 2021












