ಸನ್ಮಾರ್ಗ ವಾರ್ತೆ
ಗುವಾಹಟಿ: ಕೊರೋನ ಸೋಂಕಿತರಾಗಿದ್ದ ಅಸ್ಸಾಮಿನ ಶಾಸಕ ತಮುಲ್ಪುರ ಶಾಸಕ ಲೋಹಾ ರಾಮ್ ಬೊರೊ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಕೊರೋನ ದೃಢಗೊಂಡ ಬಳಿಕ ಅವರು ಗುವಾಹಟಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶಾಸಕರ ನಿಧನದ ಸುದ್ದಿ ಬೊಡೊಲೆಂಡ್ ಟೆರಿಟೊರಿಯಲ್ ಕೌನ್ಸಿಲ್ ಚೀಫ್ ಎಕ್ಸಿಕ್ಯೂಟಿವ್ ಸದಸ್ಯ, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಅಧ್ಯಕ್ಷ ಪ್ರಮೋದ್ ಬೊರೊ ದೃಢೀಕರಿಸಿದ್ದಾರೆ.
ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಟಿಕೇಟಿನಿಂದ ಅವರು ಚುನಾವಣೆ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆಯೇ ಸ್ಟ್ರೋಕ್ ಕೂಡ ಆಗಿತ್ತು. ನಂತರ ಅವರು ನಿಧನರಾಗಿದ್ದಾರೆ. ಮೇ 26ಕ್ಕೆ ಬೊಡೊ ಪೀಪಲ್ಸ್ ಫ್ರಂಟ್ ಶಾಸಕರಾದ ಮಜೇಂದ್ರ ನರ್ಸಾರಿ ಕೊರೋನದಿಂದ ಮೃತಪಟ್ಟಿದ್ದರು. ಅವರು ಅಸ್ಸಾಂನ ಗೋಸಯ್ಗೋನ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು.












