ಮಂಗಳೂರು: ಅಲ್ – ಅಮೀನ್ ಚಾರಿಟೇಬಲ್ ನಿಂದ ಗರ್ಭಿಣಿಯರಿಗೆ ಹಣ್ಣು ಹಂಪಲು ವಿತರಣೆ

0
638

ಸನ್ಮಾರ್ಗ ವಾರ್ತೆ

ಮಂಗಳೂರು: ತಲ್ಲತ್ ಫೈಝಲ್‌ ನಗರ ಅವರ ನೇತೃತ್ವದ ಅಲ್-ಅಮೀನ್ ಚಾರಿಟೇಬಲ್ ಟ್ರಸ್ಟ್ ನ ಲೋಗೋ ಅನಾವರಣ ಹಾಗೂ ಲೇಡಿಗೋಷನ್ ಆಸ್ಪತ್ರೆಯಲ್ಲಿನ ಗರ್ಭಿಣಿಯರಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ ನಡೆಯಿತು.

ಆಸ್ಪತ್ರೆಯ ವೈದ್ಯಕೀಯ ಮುಖ್ಯಸ್ಥ ಡಾ.‌ದುರ್ಗಾ ಪ್ರಸಾದ್ ಮಾತನಾಡಿ, ಈ ಸಂದರ್ಭದಲ್ಲಿ ಎಲ್ಲರಿಗೂ ಪೌಷ್ಠಿಕ ಆಹಾರದ ಅವಶ್ಯಕತೆ ಪ್ರಸಕ್ತ ಸನ್ನಿವೇಶದಲ್ಲಿದೆ. ಕೊರೋನದ ಈ ಸಂಕಷ್ಟ ಕಾಲದಲ್ಲಿ ಎಲ್ಲರಿಗೂ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಅಲ್-ಅಮೀನ್ ಚಾರಿಟೇಬಲ್ ಟ್ರಸ್ಟ್ ಆರಂಭಿಸಿರುವುದು ಉತ್ತಮ ಬೆಳವಣಿಗೆ ಎಂದರು.

ಹುಸೈನ್ ಕಾಟಿಪಳ್ಳ ಮಾತನಾಡಿ ಅಲ್-ಅಮೀನ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯ ವೈಖರಿಯನ್ನು ವಿವರಿಸಿದರು.

ಡಾ.‌ಬಾಲಕೃಷ್ಣ ರಾವ್ ರಾವ್, ರೆಡ್‌ಕ್ರಾಸ್ ಸಂಸ್ಥೆಯ ಪ್ರವೀಣ್ ಕುಮಾರ್, ಅಲ್-ಅಮೀನ್ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಅರ್ಷದ್ ಕಂದಕ್, ಸದಸ್ಯ ರವೂಫ್ ಬಂದರ್, ಕಾರ್ಯದರ್ಶಿ ನಿಶಾರ್ ಅಹಮದ್, ಜತೆ ಕಾರ್ಯದರ್ಶಿ ಶಬೀರ್ ಉಜಿರೆ ಮತ್ತಿತರರು ಉಪಸ್ಥಿತರಿದ್ದರು.