ಕೊರೋನಾ ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಟಿವಿ, ಫ್ರೀಜರ್ ಗೆಲ್ಲುವ ಅವಕಾಶ; ಮಹಾರಾಷ್ಟ್ರದಲ್ಲಿ ನೂತನ ಪ್ರಯೋಗ

0
394

ಸನ್ಮಾರ್ಗ ವಾರ್ತೆ

ಹಕೊರೋನ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿರುವುದನ್ನು ಮನಗೊಂಡು ಮಹಾರಾಷ್ಟ್ರದ ಹಿಂಗೋಲಿ ಪುರಸಭೆ ಆಕರ್ಷಕ ವಿಧಾನವೊಂದನ್ನು ಕಂಡುಕೊಂಡಿದೆ.

ಲಸಿಕೆ ಪಡೆದವರಿಗೆ ಎಲ್ಇಡಿ ಟಿವಿ, ವಾಷಿಂಗ್ ಮೆಷಿನ್, ರೆಫ್ರಿಜಿರೇಟರ್ ಸೇರಿದಂತೆ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಗೆಲ್ಲುವ ಆಫರನ್ನು ನೀಡಲಾಗಿದೆ.

ಚಂದ್ರಾಪುರ ಸ್ಥಳೀಯ ಸಂಸ್ಥೆಯಲ್ಲಿ ಜನರು ಲಸಿಕೆ ಪಡೆಯುವುದನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಇದೇ ರೀತಿಯ ಬಹುಮಾನದ ಘೋಷಣೆ ಮಾಡಲಾಗಿದೆ.

ಮುಂಬೈನಿಂದ 500 ಕಿಲೋಮೀಟರ್ ದೂರದಲ್ಲಿರುವ ಹಿಂಗೋಲಿ ಜಿಲ್ಲೆಯಲ್ಲಿ ಶೇಕಡಾ 73ರಷ್ಟು ಅರ್ಹ ಫಲಾನುಭವಿಗಳು ಕೊರೋನಾ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. ಶೇಕಡ 50ರಷ್ಟು ಜನರು ಎರಡೂ ಡೋಸ್ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಕೋರೋನಾ ಮೂರನೇ ಅಲೆಯ ಆತಂಕದ ನಡುವೆ ತುರ್ತು ಸಭೆ ನಡೆಸಿದ ಹಿಂಗೋಲಿ ಡಿಸಿ ಜಿತೇಂದ್ರ ಪಾಪಲ್ಕರ್ ಹೆಚ್ಚು ಜನ ಲಸಿಕೆ ಪಡೆಯುವಂತೆ ಉತ್ತೇಜಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಡಿಸೆಂಬರ್ 27 ರಂದು ಲಕ್ಕಿ ಡ್ರಾ ನಡೆಯಲಿದ್ದು ಡಿಸೆಂಬರ್ 2 ರಿಂದ 24ರ ನಡುವೆ ಲಸಿಕೆ ಪಡೆದವರಿಗೆ ಲಕ್ಕಿ ಡ್ರಾ ಟಿಕೆಟ್ ಸಿಗಲಿದೆ.