ಗುಜರಾತ್: ದುಬೈಯಿಂದ ಆಗಮಿಸಿದವರಲ್ಲಿ 30 ಮಂದಿಗೆ ಕೊರೋನ

0
228

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಗುಜರಾತಿನಲ್ಲಿ ದುಬೈಯಿಂದ ಬಂದ 30 ಮಂದಿಯಲ್ಲಿ ಕೊರೋನ ದೃಢಪಟ್ಟಿದೆ. ಕೊರೋನ ದೃಢಪಟ್ಟವರ ಸ್ಯಾಂಪಲ್ ಸಂಗ್ರಹಿಸಿ ಜಿನೆಂ ಸ್ವೀಕ್ವೆನ್ಸಿಂಗ್‍ಗೆ ಕಳುಹಿಸಲಾಗಿದೆ. ಬೃಹನ್ಮುಂಬಯಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಓಮಿಕ್ರಾನ್ ಕುರಿತ ಆತಂಕ ಹೆಚ್ಚಿದ್ದು ನಗರಕ್ಕೆ ಓಮಿಕ್ರಾನ್ ಇರುವ ದೇಶದಿಂದ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಇವರನ್ನು ಏಳು ದಿನಗಳ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರ ನಿರ್ಗಮ ಆಗಮನ ನಡೆಯುತ್ತಿದ್ದು, ವಿಮಾನ ನಿಲ್ದಾಣ ಅಧಿಕಾರಿಗಳ ಸಮನ್ವಯದಲ್ಲಿ ಬೃಹನ್ಮುಂಬಯಿ ಪಾಲಿಕೆ ಕಟ್ಟುನಿಟ್ಟಿನ ಏಳು ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಿದೆ. ಪ್ರಯಾಣಿಕರನ್ನು ಅವರು ಆಗಮಿಸಿದ ಸ್ಥಳದಳಲ್ಲಿನ ಕೋರೋನ ಪ್ರಮಾಣದ ಮೇಲೆ ವಿಂಡಿಸಲಾಗಿದೆ.