ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ತತ್ಕಾಲ್ ರೈಲು ಟಿಕೆಟು ಬುಕ್ ಮಾಡಲು ಇನ್ನು ಕಷ್ಟ ಪಡಬೇಕಾಗಿಲ್ಲ. ಕನ್ಫರ್ಮ್ ಟಿಕೆಟ್ ಎಂಬ ವಿಶೇಷ ಮೊಬೈಲ್ ಆ್ಯಪ್ವೊಂದನ್ನು ರೈಲ್ವೆ ಪರಿಚಯಿಸಿದೆ. ಈ ಆ್ಯಪ್ ಮುಲಕ ತತ್ಕಾಲ್ ಸಹಿತ ಇತರ ಟಿಕೆಟುಗಳನ್ನೂ ಬುಕ್ ಮಾಡುವ ಸೌಕರ್ಯವನ್ನು ರೈಲ್ವೆ ಒದಗಿಸುತ್ತಿದೆ.
ನಿಗದಿತ ರೂಟ್ನಲ್ಲಿ ಚಲಿಸುವ ಎಲ್ಲ ರೈಲುಗಳಿಗೂ ತತ್ಕಾಲ್ ಕೋಟಾದಲ್ಲಿರುವ ಖಾಲಿ ಸೀಟುಗಳ ಸಂಖ್ಯೆಯನ್ನು, ಸಮಯಾವಳಿಯನ್ನೂ ಈ ಆ್ಯಪ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಟಿಕೆಟು ರದ್ದು ಮಾಡಲು ಹಾಗೂ ಹೆಚ್ಚಿನ ವಿವರ ತಿಳಿಯ ಬಯಸುವವರಿಗೆ, ರೈಲಿನ ಹೆಸರು, ನಂಬ್ರ ಕೊಡುವ ಅಗತ್ಯವಿಲ್ಲದ್ದು ಈ ಆ್ಯಪ್ನ ವಿಶೇಷವಾಗಿದೆ. ಗೂಗಲ್ ಪ್ಲೇ ಸ್ಟೋರಿನಿಂದ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು.












