ಸನ್ಮಾರ್ಗ ವಾರ್ತೆ
ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂದಿಸಿ ಬೆಂಗಳೂರಿನ ಶಿಕ್ಷಣ ಸಂಸ್ಥೆಗಳ ಸಮೀಪ ಹಾಕಿದ ನಿಷೇಧಾಜ್ಞೆ ವಿಸ್ತರಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಮುಚ್ಚಲಾದ ಶಿಕ್ಷಣ ಸಂಸ್ಥೆಗಳು ಪುನಃ ತೆರೆಯಲ್ಪಡುತ್ತಿರುವುದರ ಅಂಗವಾಗಿ ಶಾಲಾ ಕಾಲೇಜುಗಳ 200 ಮೀಟರ್ ಸುತ್ತಳತೆಯಲ್ಲಿ ಬೆಂಗಳೂರು ಪೊಲೀಸರು ನಿಷೇಧಾಜ್ಞೆ ಹೇರಿದ್ದರು.
ಸಮಸ್ಯೆ ಈಗಲೂ ಸಕ್ರಿಯವಾಗಿರುವುದರಿಂದ ಬೆಂಗಳೂರು ನಗರದಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದ್ದು ಪ್ರತಿಭಟನೆ ಆಗದೆಂದು ಹೇಳುವಂತಿಲ್ಲ ಎಂದು ಬೆಂಗಳೂರು ಪೊಲೀಸರ ಆದೇಶದಲ್ಲಿ ತಿಳಿಸಲಾಗಿದೆ. ಫೆಬ್ರುವರಿ 26ರವರೆಗೆ ನಿಷೇಧಾಜ್ಞೆ ಮುಂದುವರಿಯುತ್ತದೆ.
2021ರ ಕೊನೆಯಲ್ಲಿ ಶಾಲೆಗಳಲ್ಲಿ ಶಿರವಸ್ತ್ರ ಧರಿಸುವುದನ್ನು ತಡೆದುದು ರಾಜ್ಯದಲ್ಲಿ ವ್ಯಾಪಕವಾಗಿ ಪ್ರತಿಭಟನೆಗೆ ಕಾರಣವಾಗಿದೆ. ಇದರ ವಿರುದ್ಧ ಕೇಸರಿ ಶಾಲುಗಳನ್ನು ಧರಿಸಿ ವಿದ್ಯಾರ್ಥಿಗಳು ಬಂದಿದ್ದರು. ನಂತರ ಶಿಕ್ಷಣಾಲಯಗಳಲ್ಲಿ ಧಾರ್ಮಿಕ ಚಿಹ್ನೆಗಳನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟು ಮಧ್ಯಂತರ ಆದೇಶ ನೀಡಿತ್ತು.












