ಪೌರತ್ವ ತಿದ್ದುಪಡಿ ಕಾನೂನಿನ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ; ತಡವಾದುದು ಕೋವಿಡ್‍ನಿಂದ: ಅಮಿತ್ ಶಾ

0
351
ಸಾಂದರ್ಭಿಕ ಚಿತ್ರ

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾನೂನಿನ ವಿಷಯದಲ್ಲಿ ಹಿಂದೆ ಸರಿಯುವ  ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ರಾಷ್ಟ್ರೀಯ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಹೀಗೆಂದರು. ಕೊರೋನ ಕಾರಣದಿಂದ ಕಾನೂನು ಜಾರಿಗೆ ವಿಳಂಬವಾಗಿದೆ ಎಂದು ಅವರು ಹೇಳಿದರು. 2019 ಡಿಸೆಂಬರ್ 11ಕ್ಕೆ ಸಿಎಎ ಪಾರ್ಲಿಮೆಂಟಿನಲ್ಲಿ ಜಾರಿಮಾಡಲಾಗಿದ್ದು, ಮರುದಿನವೇ ರಾಷ್ಟ್ರಪತಿ ಸಹಿ ಹಾಕಿದ್ದರು. ತದನಂತರ ಸಿಎಎಯ ಅಧೀನದ ನಿಬಂಧನೆಗಳು ಈವರೆಗೆ ರೂಪುಗೊಂಡಿಲ್ಲ. ಆದುದರಿಂದ ಜಾರಿಗೆ ಬಂದಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಮುಸ್ಲಿಮೇತರರಿಗೆ ಭಾರತದ ನಾಗರಿಕತೆ ನೀಡುವುದು ಸಿಎಎ ಕಾನೂನು.

“ಈವರೆಗೆ ನಾವು ಕೊರೋನ ಮುಕ್ತರಾಗಿಲ್ಲ. ಆದ್ದರಿಂದ ಸಿಎಎಗೆ ಈಗ ಆದ್ಯತೆ ನೀಡಲು ಸಾಧ್ಯವಿಲ್ಲ. ನಾವು ಇದುವರೆಗೆ ಕೊರೋನದ ಅಲೆಗಳನ್ನು ಕಂಡೆವು. ಅದೃಷ್ಟದಿಂದ ಈಗ ಸುಧಾರಿಸಿಕೊಳ್ಳುತ್ತಿದ್ದೇವೆ. ಮೂರನೇ ಅಲೆಯೂ ಹಿಂದೆ ಸರಿಯುತ್ತಿದೆ. ಸಿಎಎಗೆ ಸಂಬಂಧಿಸಿದ ತೀರ್ಮಾನಗಳು ಕೊರೋನ ಪರಿಸ್ಥಿತಿಗೆ ಸಂಬಂಧಿಸಿದೆ. ಏನೇ ಆದರೂ ಅದರಲ್ಲಿ ಹಿಂದೆ ಸರಿಯುವ ವಿಷಯವಿಲ್ಲ. ಸಿಎಎ ಯಾವಾಗ ಜಾರಿಯಾಗುತ್ತದೆ ಎಂದು ಕೇಳಿದಾಗ ಅಮಿತ್ ಶಾ ಪ್ರತಿಕ್ರಿಯಿಸಿದರು. ಈ ಕಾನೂನಿನ ಕಾರಣ ಭಾರತದ ಯಾವ ಪ್ರಜೆಗಳು ನಷ್ಟವಿಲ್ಲ ಎಂದು ಅವರು ಹೇಳಿದರು.

ಈ ವರ್ಷ ಜನವರಿಯಲ್ಲಿ ಸಿಎಎಗೆ ನಿಬಂಧನೆ ತಯಾರಿಸುವ ವಿಷಯದಲ್ಲಿ ಹೆಚ್ಚಿನ ಸಮಯ ಕೇಳಿ ಕೇಂದ್ರ ಗೃಹ ಸಚಿವಾಲಯ ಪಾರ್ಲಿಮೆಂಟ್ ಸಮಿತಿಗಳನ್ನು ಸಂಪರ್ಕಿಸಿತ್ತು. ಸಿಎಎ ಪರಕಾರ ಅರ್ಹತೆಯುಳ್ಳವರಿಗೆ ಮಾತ್ರ ಭಾರತದ ಪೌರತ್ವ ಕೊಡುವುದಾಗಿ ಕೇಂದ್ರ ಸರಕಾರ ಈಗಾಗಲೇ ಹೇಳಿಯಾಗಿದೆ.

ರಾಷ್ಟ್ರಪತಿಯ ಅನುಮತಿ ಲಭಿಸಿದ ಆರು ತಿಂಗಳೊಳಗೆಯೇ ಕಾನೂನು ರೂಪುಗೊಳ್ಳಬೇಕು. ಇಲ್ಲದಿದ್ದರೆ ಹೆಚ್ಚು ಸಮಯವನ್ನು ಲೋಕಸಭೆ, ರಾಜ್ಯಸಭೆಯ ಇದಕ್ಕೆ ಸಂಬಂಧಿಸಿದ ಸಮಿತಿಯಿಂದ ಪಡೆದುಕೊಳ್ಳಬೇಕು. ಸಿಎಎಗೆ ಆರು ತಿಂಗಳಲ್ಲಿ ಗೃಹ ಸಚಿವಾಲಯಕ್ಕೆ ನಿಯಮ ರಚಿಸಲು ಆಗದ್ದರಿಂದ ಇಂತಹ ಸಮಿತಿಗಳನ್ನು ಹೆಚ್ಚು ಸಮಯ ಕೊಡಿ ಎಂದು ಹಲವು ಬಾರಿ ಸಮಯಾವಧಿಯನ್ನು ಗೃಹ ಸಚಿವಾಲಯ ಪಡೆದುಕೊಂಡಿದೆ.