ಲಖಿಂಪುರ ಪ್ರಕರಣ| ಪ್ರಧಾನ ಸಾಕ್ಷಿಗಳನ್ನು ಸಂರಕ್ಷಿಸಲು SC ಆದೇಶ: ಆಶಿಷ್ ಮಿಶ್ರಾ ಜಾಮೀನಿನ ವಿರುದ್ಧದ ಮನವಿಗೆ ಯುಪಿ ಸರಕಾರದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

0
408

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಲಖೀಂಪುರ ಖೇರಿ ಪ್ರಕರಣದ ಆರೋಪಿ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಷ್ ಮಿಶ್ರರಿಗೆ ಜಾಮೀನು ನೀಡಿದ ಅಲಾಹಾಬಾದಿನ ಹೈಕೋರ್ಟಿನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯಲ್ಲಿ ಉತ್ತರಪ್ರದೇಶ ಸರಕಾರದೊಂದಿಗೆ ಸುಪ್ರೀಂಕೋರ್ಟು ಪ್ರತಿಕ್ರಿಯೆ ಕೇಳಿದೆ. ಪ್ರಕರಣದ ಪ್ರಧಾನ ಸಾಕ್ಷಿಗಳನ್ನು ಸಂರಕ್ಷಿಸಬೇಕೆಂದು ಸುಪ್ರೀಂ ಕೋರ್ಟು ಹೇಳಿತು. ಪ್ರಕರಣ ಮಾರ್ಚ್ 24ಕ್ಕೆ ಪುನಃ ವಿಚಾರಣೆಗೆತ್ತಿಕೊಳ್ಳಲಿದೆ.

ಮಾರ್ಚ್ 12ಕ್ಕೆ ಪ್ರಕರಣದ ಒಬ್ಬ ಪ್ರಧಾನ ಸಾಕ್ಷಿಗೆ ಹಲ್ಲೆ ನಡೆಸಲಾಗಿದೆ ಎಂದು ಅರ್ಜಿದಾರ ಸುಪ್ರೀಂ ಕೋರ್ಟಿನ ಪೀಠಕ್ಕೆ ತಿಳಿಸಿದ್ದರು. ಈ ಕುರಿತು ಸಾಕ್ಷಿಗಳಿಗೆ ರಕ್ಷಣೆ ಕೊಡಬೇಕೆಂದು ಆಗ್ರಹಿಸಿ ವಿವರವಾದ ವರದಿಯನ್ನು ಸಲ್ಲಿಸಲು ಉತ್ತರಪ್ರದೇಶ ಸರಕಾರಕ್ಕೆ ಚೀಫ್ ಜಸ್ಟಿಸ್ ಅಧ್ಯಕ್ಷತೆಯ ಪೀಠ ಹೇಳಿತು. ಜಾಮೀನು ರದ್ದುಪಡಿಸಲು ಕೋರಿ ಸಲ್ಲಿಸಿದ ಅರ್ಜಿಯಲ್ಲಿ ಆಶಿಷ್ ಮಿಶ್ರರಿಗೆ ಸುಪ್ರೀಂ ಕೋರ್ಟು ನೋಟಿಸು ಕಳುಹಿಸಿತು.

ಸುಪ್ರೀಂ ಕೋರ್ಟು ಸ್ವಪ್ರೇರಣೆಯಿಂದ ಕೇಸು ದಾಖಲಿಸಿ ವಿಶೇಷ ತನಿಖಾ ತಂಡವನ್ನು ನಿಯೋಜಿಸಿರುವುದನ್ನು ಕಡೆಗಣಿಸಿ ಹೈ ಕೋರ್ಟು ಜಾಮೀನು ನೀಡಿದೆ ಎಂದು ವಕೀಲ ದುಷ್ಯಂತ್ ದುಬೆ ಹೇಳಿದರು. ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯರ ಲಖೀಂಪುರ ಸಂದರ್ಶನದ ವಿರುದ್ಧ ನಡೆದ ರೈತ ಪ್ರತಿಭಟನೆಯ ವೇಳೆ ಆಶಿಷ್ ಮಿಶ್ರನ ವಾಹನ ರೈತರ ಮೇಲೆ ಚಲಾಯಿಸಿ ಹತ್ಯೆ ನಡೆಸಿದ ಆರೋಪ ಇದೆ. ಪ್ರಕರಣದ ಮುಖ್ಯ ಆರೋಪಿ ಆಶಿಷ್ ಮಿಶ್ರಗೆ ಫೆಬ್ರುವರಿಯಲ್ಲಿ ಅಲಾಹಾಬಾದ್ ಹೈಕೋರ್ಟು ಜಾಮೀನು ಮಂಜೂರು ಮಾಡಿತ್ತು.