ಸನ್ಮಾರ್ಗ ವಾರ್ತೆ
ಬುರೈದಾ: ವಿಸಿಟಿಂಗ್ ವಿಸಾವನ್ನು ಇಕಾಮ ಆಗಿ ಅಥವಾ ಉದ್ಯೋಗ ವಿಸಾ ಆಗಿ ಮಾರ್ಪಡಿಸಬಹುದು ಎಂಬುದು ಸುಳ್ಳು ಪ್ರಚಾರ ಎಂದು ಸೌದಿಯ ಪಾಸ್ಪೋರ್ಟ್ ಜನರಲ್ ಡೈರೆಕ್ಟರ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಪ್ರಸಾರ ಮಾಡಿರುವ ಹಿನ್ನೆಲೆಯಲ್ಲಿ ಪಾಸ್ಪೋರ್ಟ್ ಅಧಿಕಾರಿಗಳಿಂದ ಈ ಸ್ಪಷ್ಟನೆ ವ್ಯಕ್ತವಾಗಿದೆ.
ವಿಸಿಟಿಂಗ್ ವೀಸಾವನ್ನು ಉದ್ಯೋಗ ವೀಸಾವಾಗಿ ಪರಿವರ್ತಿಸಲು ಸೌದಿ ಗೃಹ ಸಚಿವಾಲಯದಿಂದ ಅನುಮತಿ ಲಭಿಸಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರದಲ್ಲಿತ್ತು.
ವಿಸಿಟಿಂಗ್ ವೀಸಾವನ್ನು ಇಕಾಮ ಆಗಿ ಮಾರ್ಪಡಿಸಲೋ ವಿಸಿಟಿಂಗ್ ವೀಸಾದಲ್ಲಿ ದೇಶಕ್ಕೆ ಬಂದವರಿಗೆ ಕೆಲಸದಲ್ಲಿ ತೊಡಗಿಕೊಳ್ಳಲೋ ಅನುಮತಿಸುವ ಯಾವ ತೀರ್ಮಾನವನ್ನೂ ಗೃಹ ಸಚಿವಾಲಯ ಕೈಗೊಂಡಿಲ್ಲ. ವಿಸಿಟಿಂಗ್ ವೀಸಾದಲ್ಲಿ ಬರುವ 18 ವಯಸ್ಸಿಗಿಂತ ಕೆಳಗಿನ ಮಕ್ಕಳಿಗೆ ಅವರ ಹೆತ್ತವರು ಸೌದಿ ಇಕಾಮ ಪಡೆದವರಾಗಿದ್ದರೆ ಆ ಮಕ್ಕಳ ವಿಸಿಟಿಂಗ್ ವೀಸಾವನ್ನು ಇಕಾಮ ಆಗಿ ಪರಿವರ್ತಿಸುವ ತೀರ್ಮಾನವನ್ನು ಮಾತ್ರ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.












