ಸನ್ಮಾರ್ಗ ವಾರ್ತೆ
ದುಬೈ:ರಷ್ಯಾ ಮತ್ತು ಯುಕ್ರೇನ್ ಸಂಘರ್ಷದ ನಡುವೆ ಯುಎಇ ಅಧ್ಯಕ್ಷ ಶೈಖ್ ಮುಹಮ್ಮದ್ ಬಿನ್ ಜಾಯೆದ್ ಅವರು ಮಂಗಳವಾರ ರಷ್ಯಾಕ್ಕೆ ತೆರಳಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಎಮಿರೇಟ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಮೆರಿಕದ ಮಿತ್ರರಾಷ್ಟ್ರವಾಗಿರುವ ಯುಎಇಯ ಈ ನಡೆಗೆ ಎಲ್ಲೆಡೆ ಅಚ್ಚರಿ ವ್ಯಕ್ತವಾಗಿದೆ.
ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಆಡಳಿತಗಾರರು ರಷ್ಯಾಕ್ಕೆ ಭೇಟಿ ಕೊಡುತ್ತಿಲ್ಲ. ಉಕ್ರೇನ್ ವಿಷಯದಲ್ಲಿ ರಷ್ಯಾದ ನಿಲುವನ್ನು ಪ್ರತಿಭಟಿಸಿ ಈ ರಾಷ್ಟ್ರಗಳು ರಷ್ಯಾವನ್ನು ಒಂದಷ್ಟು ದೂರವಿಟ್ಟಿದೆ. ಯುಎಇ ಅಮೆರಿಕದ ಮಿತ್ರ ರಾಷ್ಟ್ರವಾಗಿದ್ದು ಈ ಹಿನ್ನೆಲೆಯಲ್ಲಿ ಅಧ್ಯಕ್ಷರು ಅಲ್ಲಿಗೆ ಭೇಟಿ ಕೊಡುವುದು ವಿವಿಧ ರೀತಿಯ ಚರ್ಚೆಗಳಿಗೆ ಕಾರಣವಾಗಿದೆ. ಮುಖ್ಯವಾಗಿ ಪ್ರಾದೇಶಿಕ ಸಮಸ್ಯೆಗಳು ಮತ್ತು ಗೆಳೆತನವನ್ನು ವೃದ್ಧಿಗೊಳಿಸುವುದು ಭೇಟಿಯ ಉದ್ದೇಶ ಎಂದು ಹೇಳಲಾಗುತ್ತಿದೆ.
ರಷ್ಯಾ ಭೇಟಿಯು ಉಕ್ರೇನಿಯನ್ ಬಿಕ್ಕಟ್ಟಿಗೆ ಪರಿಣಾಮಕಾರಿ ರಾಜಕೀಯ ಪರಿಹಾರಗಳನ್ನು ತಲುಪಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂದು ಯುಎಇ ವಿದೇಶಾಂಗ ಸಚಿವಾಲಯ ಹೇಳಿದೆ.












