ಸನ್ಮಾರ್ಗ ವಾರ್ತೆ
ಕೇರಳ:ಪತ್ತನಂತಿಟ್ಟದ ಇಳಂತೂರಿನಲ್ಲಿ ಇಬ್ಬರು ಮಹಿಳೆಯರನ್ನು ನರಬಲಿ ದೇಶವನ್ನೇ ಬೆಚ್ಚಿ ಬೀಳಿಸಿದೆ. ರೋಸ್ಲಿಲ್ ಮತ್ತು ಪದ್ಮಾ ಎಂಬ ಮಹಿಳೆಯರು ನರಬಲಿ ಬಲಿಗೆ ಹತರಾದ ದುರ್ದೈವಿಗಳು. ಆರೋಪಿಗಳಾದ ಭಗವಲ್ ಸಿಂಗ್, ಆತನ ಪತ್ನಿ ಲೈಲಾ ಮತ್ತು ಇಳಂತೂರಿನಲ್ಲಿ ವಾಸವಾಗಿದ್ದ ಮಾಂತ್ರಿಕ ಶಫಿ ಸೇರಿ ಇಬ್ಬರನ್ನೂ ಕತ್ತು ಸೀಳಿ ಕೊಂದಿದ್ದಾರೆ.
ಆರೋಪಿ ಲೈಲಾ ವಿಚಾರಣೆಯ ವೇಳ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದ್ದು, ಶ್ರೀಮಂತಿಕೆ, ಅಭಿವೃದ್ಧಿಗಾಗಿ ರೋಸ್‍ಲಿನ್‍ರ ಮಾಂಸವನ್ನು ಪದಾರ್ಥ ಮಾಡಿ ಮೂವರು ಸೇರಿ ಅದನ್ನು ಸೇವಿಸಿದ್ದಾಗಿ ಸ್ವತಃ ಲೈಲಾ ಪೊಲೀಸರಿಗೆ ತಿಳಿಸಿದ್ದಾಳೆ. ಪದ್ಮಾರ ಮಾಂಸವನ್ನು ಬಳಿಕ ಪದಾರ್ಥ ಮಾಡಲೆಂದು ಇವರು ಉಪ್ಪು ಬೆರೆಸಿ ತೆಗೆದಿಟ್ಟಿದ್ದಾಗಿ ಲೈಲಾ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.












