ಸನ್ಮಾರ್ಗ ವಾರ್ತೆ
ಶ್ರೀನಗರ: ಭಾರತ-ಪಾಕ್ ಗಡಿಯಲ್ಲಿ ನುಸುಳಲು ಯತ್ನಿಸಿದ ಪಾಕಿಸ್ತಾನಿ ಪ್ರಜೆಯನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆಗೈದಿವೆ. ಜಮ್ಮುವಿನ ಅರ್ನಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಂತರಾಷ್ಟ್ರೀಯ ಗಡಿಯಲ್ಲಿ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಗಿದೆ. ಹಾಗೂ ಈ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ ಎಂದು ಭದ್ರತಾ ಪಡೆ ಬಿಎಸ್ಎಫ್ ತಿಳಿಸಿವೆ.
ಪಾಕಿಸ್ತಾನದ ಕಡೆಯಿಂದ ಬಂದ ಒಬ್ಬ ವ್ಯಕ್ತಿ ಸುರಕ್ಷಾ ಸೇನೆಯ ನಿಷೇಧವನ್ನು ಲೆಕ್ಕಿಸದೆ ಅಂತಾರಾಷ್ಟ್ರೀಯ ಗಡಿಯಲ್ಲಿರುವ ಬೇಲಿಯನ್ನು ದಾಟಲು ಯತ್ನಿಸಿದು. ನಂತರ ಈತನ ಮೇಲೆ ಗುಂಡು ಹಾರಿಸಲಾಗಿದೆ.
ಸಬಾ ಜಿಲ್ಲೆಯಲ್ಲಿ ಮತ್ತೊಂದು ಒಳನುಸುಳುವಿಕೆ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ. ನವೆಂಬರ್ 3ರಂದು ಪೂಂಚ್ನಲ್ಲಿ ಎಲ್ಒಸಿ ನುಸುಳಲು ಯತ್ನಿಸಿದ ಭಯೋತ್ಪಾದಕನನ್ನು ಸೇನೆ ಹತ್ಯೆ ಮಾಡಿತ್ತು.












