ಜಾತ್ಯತೀತನಾಗಿ ಕೇವಲ ಒಂದು ವಿಭಾಗದವರನ್ನು ಗುರಿಯಾಗಿಟ್ಟುಕೊಳ್ಳಬೇಡಿ; ಸುಪ್ರೀಂ ಕೋರ್ಟು

0
415

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಧರ್ಮದ ಹೆಸರು ಚಿಹ್ನೆಗಳನ್ನು ಉಪಯೋಗಿಸುವ ರಾಜಕೀಯ ಪಾರ್ಟಿಗಳನ್ನು ನಿಷೇಧಿಸುವ ಬೇಡಿಕೆ ಮುಂದಿಡುವಾಗ ಪ್ರತ್ಯೇಕ ಮತ ವಿಭಾಗವನ್ನು ಗುರಿಯಾಗಿರಿಸಿಕೊಳ್ಳಬೇಡಿ ಎಂದು ಸುಪ್ರೀಂ ಕೋರ್ಟು ಹೇಳಿದೆ. ಮುಂದಿನ ಬಾರಿ ಕೇಸು ವಿಚಾರಣೆಯ ವೇಳೆ ಇತರ ಧಾರ್ಮಿಕ ವಿಭಾಗದ ಹೆಸರು ಮತ್ತು ಚಿಹ್ನೆಗಳನ್ನು ಉಪಯೋಗಿಸುವ ರಾಜಕೀಯ ಪಾರ್ಟಿಗಳ ಹೆಸರನ್ನು ಕೂಡ ಅರ್ಜಿಯಲ್ಲಿ ಸೇರಿಸಬೇಕೆಂದು ಅರ್ಜಿದಾರ ತೀವ್ರ ಹಿಂದುತ್ವ ನಾಯಕನಿಗೆ ಸುಪ್ರೀಂಕೋರ್ಟು ಸೂಚಿಸಿದೆ. ಪ್ರಕರಣವನ್ನು ಸಂವಿಧಾನದ ಪೀಠಕ್ಕೆ ವರ್ಗಾಯಿಸುವ ವಿಷಯವನ್ನು ನಂತರ ಪರಿಗಣಿಸುವುದಾಗಿ ಸುಪ್ರೀಂಕೋರ್ಟು ತಿಳಿಸಿತು.

ಹಿಂದೂ ಧರ್ಮ ಸ್ವೀಕರಿಸಿದ ತೀವ್ರ ಹಿಂದುತ್ವವಾದಿಯಾದ ಉತ್ತರಪ್ರದೇಶದ ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷ ಜಿತೇಂದ್ರ ನಾರಾಯಣ ತ್ಯಾಗಿ ಯಾನೆ ಸಯ್ಯಿದ್ ರಿಝ್ವಿಯವರು ಧರ್ಮದ ಹೆಸರುಗಳು ಚಿಹ್ನೆಗಳನ್ನು ಉಪಯೋಗಿಸುವ ಪಾರ್ಟಿಯ ನೋಂದಣಿ ರದ್ದುಪಡಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಮುಸ್ಲಿಮರನ್ನು ಮಾತ್ರ ಅರ್ಜಿಯಲ್ಲಿ ಗುರಿಯಿರಿಸಲಾಗಿದೆ ಎಂದು ಮುಸ್ಲಿಂ ಲೀಗ್ ಕೋರ್ಟಿನ ಗಮನ ಸೆಳೆದಾಗ ಸುಪ್ರೀಂಕೋರ್ಟು ತನ್ನ ನಿಲುವನ್ನು ವ್ಯಕ್ತಪಡಿಸಿತು. ಲೀಗ್ ಪರ ಹಿರಿಯ ವಕೀಲ ದುಷ್ಯಂತ್ ದವೆ ಹಾಜರಾಗಿದ್ದು ಅವರು ಮುಂದಿಟ್ಟ ವಿಷಯವನ್ನು ಪರಿಗಣಿಸಬೇಕೆಂದು ಜಸ್ಟಿಸ್ ಶಾ ಹೇಳಿದರು.

ಅರ್ಜಿದಾರರು ಎಲ್ಲರೊಂದಿಗೆ ನ್ಯಾಯಪೂರ್ಣ ಮತ್ತು ಜಾತ್ಯತೀತನಾಗಿ ಇರಬೇಕೆಂದು ಕೋರ್ಟು ಹೇಳಿತು. ಎಲ್ಲ ಪಾರ್ಟಿಗಳನ್ನು ಕಕ್ಷಿಯನ್ನಾಗಿ ಸೇರಿಸಬೇಕೆಂಬುದು ಪ್ರಾಯೋಗಿಕ ಅಲ್ಲದಿದ್ದರೆ ಒಂದೇ ಧರ್ಮ ವಿಭಾಗದ ಧಾರ್ಮಿಕ ಹೆಸರುಗಳನ್ನು ಉಪಯೋಗಿಸುವ ಪ್ರತಿಯೊಂದು ರಾಜಕೀಯ ಪಾರ್ಟಿಗಳನ್ನು ಕಕ್ಷಿಗೆ ಸೇರಿಸಬೇಕೆಂದು ಜಸ್ಟಿಸ್‍ಗಳಾದ ಎಂ ಆರ್ ಶಾ, ಬಿವಿ ನಾಗರತ್ನರವರ ಪೀಠ ಹೇಳಿತು. ಧರ್ಮದ ಹೆಸರುಗಳು, ಧಾರ್ಮಿಕ ಚಿಹ್ನೆಗಳು ಎಲ್ಲ ಪಾರ್ಟಿಗಳನ್ನು , ಅರ್ಜಿದಾರನು ತನ್ನ ಅರ್ಜಿಯಲ್ಲಿ ಸೇರಿಸಿಲ್ಲ ಎಂದು ಅಖಿಲ ಭಾರತ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್‍ಗೆ ಹಾಜರಾದ ಮಾಜಿ ಅಟಾರ್ನಿ ಜನರಲ್ ಹಿರಿಯ ವಕೀಲ ಕೆ.ಕೆ ವೇಣುಗೋಪಾಲ್ ತಿಳಿಸಿದರು.

ಅಂತಹ ಪಾರ್ಟಿಗಳ ಪಟ್ಟಿ ಸುಪ್ರೀಂಕೋರ್ಟಿನ ಮುಂದೆ ಇರಿಸಿದ ವೇಣುಗೋಪಾಲ್ ಈ ಪ್ರಕರಣದಲ್ಲಿ ತೆಗೆಯುವ ತೀರ್ಮಾನ ಇತರ ಭಾಷಾಧಾರಿತವಾಗಿ, ಪ್ರಾದೇಶಿಕ ಆಧಾರದಲ್ಲಿ ಕಾರ್ಯವೆಸಗುವ ಹಲವಾರು ಪ್ರಾದೇಶಿಕ ಪಾರ್ಟಿಗಳಿಗೂ ಬಾಧಕವೆಂಬ ಮುನ್ನೆಚ್ಚರಿಕೆಯನ್ನೂ ನೀಡಿದರು. ಆದುದರಿಂದ ವಿಷಯದಲ್ಲಿ ಸಂವಿಧಾನ ಪೀಠಕ್ಕೆ ಇದನ್ನು ವರ್ಗಾಯಿಸಬೇಕೆಂದು ಅವರು ಹೇಳಿದರು. ನಂತರ ಮುಸ್ಲಿಂ ಲೀಗ್, ಮಜ್ಲಿಸ್ ಸಲ್ಲಿಸಿದ ಅಫಿದಾವಿತ್‍ಗಳಿಗೆ ಉತ್ತರಿಸಲು ಪೀಠ ಸಮಯವಕಾಶ ನೀಡಿತು. ಮುಸ್ಲಿಮೀನ್ ಎಂಬ ಹೆಸರಿರುವುದರಿಂದ ಮಾತ್ರ ಧಾರ್ಮಿಕ ಆಧಾರದಲ್ಲಿ ಮತ ಕೇಳುವುದು ಎಂದು ತಿಳಿಯಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ ಅಫಿದಾವಿತ್ ಸಲ್ಲಿಸಿದೆ.