ಡೊನಾಲ್ಡ್ ಟ್ರಂಪ್ ಆರೆಸ್ಟ್, ಬಿಡುಗಡೆ; ಎಷ್ಟು ಕಿತಾಪತಿ ಈ ಮನುಷ್ಯನದ್ದು

0
455

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಜೂ. 14: ರಕ್ಷಣೆಗೆ ಸಂಬಂಧಿಸಿದ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಂಡ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಬಂಧಿಸಲಾಗಿದೆ.

ಇವರ ವಿರುದ್ಧ ಸಂಚು ಸಹಿತ 7 ಆರೋಪಗಳಿವೆ ಎಂದು ಮಿಯಾಮಿ ಫೆಡರಲ್ ಕೋರ್ಟು ತಿಳಿಸಿದೆ. ಕೋರ್ಟಿಗೆ ಹಾಜರುಪಡಿಸಿ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಟ್ರಂಪ್ ತಾನು ತಪ್ಪಿತಸ್ಥನಲ್ಲ ಎಂದು ಹೇಳಿದರು.

ಆಗಸ್ಟ್ ನಲ್ಲಿ ಟ್ರಂಪ್‍ರ ಮಾರ ಲಾಗೊ ಎಸ್ಟೆಟಿನ ಮನೆಗೆ ಎಫ್‍ಬಿಐ ದಾಳಿ ನಡೆಸಿತ್ತು. ರಹಸ್ಯ ದಾಖಲೆಗಳ ಕಟ್ಟುಗಳನ್ನು ಎಫ್‍ಬಿಐ ಎಶಪಡಿಸಿಕೊಂಡಿತ್ತು.
ಅಧಿಕಾರ ಕಳಕೊಂಡ ಮೇಲೆ ಅಧಿಕೃತ ರಹಸ್ಯ ದಾಖಲೆಗಳನ್ನು ತೆಗೆದುಕೊಂಡು ಹೋದ ಪ್ರಕರಣದಲ್ಲಿ ಟ್ರಂಪ್ ವಿರುದ್ಧ ಏಳು ಆರೋಪಗಳನ್ನು ಎಫ್‍ಬಿಐ ಹೊರಿಸಿದ್ದು ಸಂಚು, ಸುಳ್ಳು ಹೇಳಿಕೆ, ಕರ್ತವ್ಯ ನಿರ್ವಹಣೆಗೆ ಅಡಚಣೆ, ರಹಸ್ಯ ದಾಖಲೆಗಳನ್ನು ಕಾನೂನು ವಿರುದ್ಧ ತನ್ನ ಬಳಿ ಇರಿಸಿಕೊಂಡದ್ದು ಇತ್ಯಾದಿ ಆರೋಪಗಳು ಡೊನಾಲ್ಡ್ ಟ್ರಂಪ್ ರ ಮೇಲಿದೆ.

ಟ್ರಂಪ್‍ರ ಕಿತಾಪತಿ ಅವರಿಗೇ ಮುಳುವಾಗುತ್ತಿದೆ. ಆರೋಪ ಸಾಬೀತಾದರೆ ಜೈಲು ಶಿಕ್ಷೆ ಖಚಿತ.
ಎಫ್‍ಬಿಐ ಎರಡನೇ ಸಲ ಟ್ರಂಪ್ ವಿರುದ್ಧ ಕೇಸು ಹಾಕಿದೆ. ಅಶ್ಲೀಲ ನಟಿಯೊಂದಿಗೆ ಸಂಬಂಧ ಇದ್ದುದನ್ನು ಅಡಗಿಸಿಡಲು ಹಣ ಕೊಟ್ಟಿರುವುದಕ್ಕೆ ಸಂಬಂಧಿಸಿ ಟ್ರಂಪ್ ವಿರುದ್ಧ ಕಳೆದ ಮಾರ್ಚ್‌ನಲ್ಲಿ ನ್ಯೂಯಾರ್ಕ್ ಕೋರ್ಟಿನಲ್ಲಿ ಎಫ್‍ಐಆರ್ ದಾಖಲಾಗಿದೆ.