2002 ಬೆಸ್ಟ್ ಬೇಕರಿ ಪ್ರಕರಣ; ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿದ ಮುಂಬೈ ವಿಶೇಷ ನ್ಯಾಯಾಲಯ

0
265

ಸನ್ಮಾರ್ಗ ವಾರ್ತೆ

ಹರ್ಷದ್ ಸೋಲಂಕಿ ಮತ್ತು ಮಫತ್ ಗೋಹಿಲ್ ಇವರನ್ನು
2002ರ ಗುಜರಾತ್ ಕೋಮು ಗಲಭೆಗೆ ಸಂಬಂಧಿಸಿದ ‘ಬೆಸ್ಟ್ ಬೇಕರಿ ಪ್ರಕರಣ’ದಲ್ಲಿ ಬಂಧಿಸಲಾಗಿತ್ತು. ಮುಂಬೈನ ವಿಶೇಷ ನ್ಯಾಯಾಲಯ ಇಬ್ಬರನ್ನು ಮಂಗಳವಾರ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ವಿಶೇಷ ಕೇಂದ್ರ ತನಿಖಾ ದಳದ (ಸಿಬಿಐ) ನ್ಯಾಯಾಧೀಶ ಎಂ.ಜಿ ದೇಶಪಾಂಡೆ ಅವರು ಇಬ್ಬರು ಆರೋಪಿಗಳು ತಪ್ಪಿತಸ್ಥರಲ್ಲ ಎಂದು ಘೋಷಿಸಿದ್ದೂ, ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸ ನೀಡಿದ್ದಾರೆ.

2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ವಡೋದರಾದಲ್ಲಿ ಬೇಕರಿಯೊಂದನ್ನು ಗುಂಪೊಂದು ಸುಟ್ಟು ಹಾಕಿತ್ತು. ಪರಿಣಾಮ ಬೇಕರಿ ಮತ್ತು ಅದರ ಬಳಿಯಿದ್ದ 14 ಮಂದಿ ಸಾವವನ್ನಪ್ಪಿದ್ದರು. ಘಟನೆ ಸಂಬಂಧ 21 ಮಂದಿ ವಿರುದ್ಧ ಬೇಕರಿ ಮಾಲಿಕನ ಪುತ್ರಿ ಜಹೀರಾ ಶೇಖ್ ದೂರು ದಾಖಲಿಸಿದ್ದರು.

ಸ್ಥಳೀಯ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದರು. ಪ್ರಕರಣವನ್ನು ವಡೋದರದ ತ್ವರಿತ ನ್ಯಾಯಾಲಯವು ವಿಚಾರಣೆ ನಡೆಸಿತ್ತು. ಜೂನ್ 2003ರಲ್ಲಿ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣದ 19 ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು. ಅದರಲ್ಲಿ ಇಬ್ಬರು ಆರೋಪಿಗಳಾದ ಸೋಲಂಕಿ ಮತ್ತು ಗೋಹಿಲ್ ಅವರೂ ಬಿಡುಗಡೆಗೊಂಡರು.

ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮತ್ತು ಜಹೀರಾ ಶೇಖ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. 2004ರಲ್ಲಿ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ಪ್ರಕರಣವದ ಮರು ವಿಚಾರಣೆಗೆ ನಿರ್ದೇಶನ ನೀಡಿತ್ತು. ಅಲ್ಲದೆ, ನ್ಯಾಯವನ್ನು ಖಾತ್ರಿಪಡಿಸುವ ಉದ್ದೇಶದಿಂದ ಪ್ರಕರಣದ ವಿಚಾರಣೆಯನ್ನು ಮುಂಬೈಗೆ ವರ್ಗಾಯಿಸಿತ್ತು.

ಇತರ ಆರೋಪಿಗಳ ವಿಚಾರಣೆ ನಡೆಯುತ್ತಿರುವಾಗಲೇ, ಅಜ್ಮೀರ್ ಸ್ಫೋಟ ಪ್ರಕರಣದಲ್ಲಿ ಸೋಲಂಕಿ ಮತ್ತು ಗೋಹಿಲ್ ಅವರನ್ನು ಬಂಧಿಸಲಾಗಿತ್ತು. ಆ ಇಬ್ಬರನ್ನೂ ಬೆಸ್ಟ್‌ ಬೇಕರಿ ಪ್ರಕರಣದ ಅಡಿಯಲ್ಲಿ 2013ರ ಡಿಸೆಂಬರ್ 13ರಂದು ಮುಂಬೈ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಕಳೆದ 10 ವರ್ಷಗಳಿಂದ ಇಬ್ಬರೂ ಮುಂಬೈ ಜೈಲಿನಲ್ಲಿದ್ದಾರೆ.