ಇಂದಿರಾ ಕ್ಯಾಂಟಿನ್ | ಊಟದ ಜತೆ ಮೊಟ್ಟೆ ನೀಡಲು ಚಿಂತನೆ

0
293

ಸನ್ಮಾರ್ಗ ವಾರ್ತೆ

ಬಿಜೆಪಿ ಸರ್ಕಾರವಿದ್ದಾಗ ಬಂದ್ ಆಗಿದ್ದ ಇಂದಿರಾ ಕ್ಯಾಂಟೀನ್‌ಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜೀವ ಬಂದಂತಾಗಿದೆ.

ಆಹಾರ ತಜ್ಞರು ಕ್ಯಾಂಟೀನ್‌ಗಳಲ್ಲಿ ಪೌಷ್ಠಿಕಾಂಶ ಆಹಾರ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದು, ಈ ಹಿನ್ನೆಲೆ ಕ್ಯಾಂಟೀನ್‌ಗಳಲ್ಲಿ ಊಟದ ಜತೆಗೆ ಮೊಟ್ಟೆ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಇಂದಿರಾ ಕ್ಯಾಂಟೀನ್‌ಗೆ ಹೊಸ ರೂಪ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದು ಕ್ಯಾಂಟೀನ್‌ನ ಊಟದ ಮೆನು ಬದಲಾವಣೆಯಾಗಲಿದೆ. ಮೆನುವನ್ನು ಬಹುತೇಕ ಮುಖ್ಯಮಂತ್ರಿಯೇ ಅಂತಿಮಗೊಳಿಸಲಿದ್ದಾರೆ.

ಸಾರ್ವಜನಿಕರು ಕ್ಯಾಂಟೀನ್‌ನಲ್ಲಿ ಚಪಾತಿ, ರಾಗಿ ಮುದ್ದೆ, ಟೀ ಸೇರಿದಂತೆ ಮಾಂಸಾಹಾರವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದರು. ವಾರದಲ್ಲಿ ಮೂರು ದಿನವಾದರೂ ಕೋಳಿ ಮೊಟ್ಟೆಯನ್ನು ನೀಡಬೇಕು ಇದರಿಂದ ಜನರಲ್ಲಿ ಪೌಷ್ಠಿಕಾಂಶ ಕೊರತೆಯನ್ನು ಸ್ವಲ್ಪಮಟ್ಟಿಗೆ ಆದರೂ ನೀಗಿಸಬಹುದು. ಕಡಿಮೆ ಬೆಲೆಯಲ್ಲಿ ಉತ್ತಮ ಆಹಾರ ನೀಡಲು ಕೋಳಿ ಮೊಟ್ಟೆ ಅತ್ಯುತ್ತಮವಾದ ಆಹಾರ ಎಂದು ಆಹಾರ ತಜ್ಞರು ಹಾಗೂ ಬಿಬಿಎಂಪಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಜಧಾನಿಯಲ್ಲಿ ಇದ್ದ 198 ಇಂದಿರಾ ಕ್ಯಾಂಟೀನ್‌ಗಳ ಸಂಖ್ಯೆಯನ್ನು 250ಕ್ಕೆ ಏರಿಸಲು ಮುಂದಾಗಿದೆ. ಇದರಲ್ಲಿ 24 ಮೊಬೈಲ್ ಕ್ಯಾಂಟೀನ್‌ಗಳು ಸೇರಿವೆ.