ಅಲ್ಪಸಂಖ್ಯಾತರ ತಾರತಮ್ಯ: ಮೋದಿ ಅಮೆರಿಕದ ಮಾಧ್ಯಮಗಳಿಗೆ ನೀಡಿದ ಉತ್ತರ ದುರ್ಬಲ ಎಂದ ಕಾಂಗ್ರೆಸ್

0
331

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜೂ.23: ಭಾರತದಲ್ಲಿ ಅಲ್ಪಸಂಖ್ಯಾತರ ತಾರತಮ್ಯ ಕುರಿತು ಅಮೆರಿಕದ ಮಾಧ್ಯಮಗಳ ಪ್ರಶ್ನೆಗೆ ಪ್ರಧಾನಿ ಮೋದಿಯವರ ಉತ್ತರ ದುರ್ಬಲವಾಗಿದೆ ಎಂದು ಕಾಂಗ್ರೆಸ್ ಪಾರ್ಟಿ ಟೀಕಿಸಿದೆ.

ಮೋದಿಯ ಉತ್ತರ ದುರ್ಬಲವಾದದ್ದು, ಅವರ ಹೇಳಿಕೆಗೆ ಆಧಾರವಿಲ್ಲ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನತೆ ಹೇಳಿದ್ದಾರೆ. ತನ್ನ ದೇಶದಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸಂರಕ್ಷಣೆಯ ಕುರಿತು ಪ್ರಶ್ನೆಗೆ ತಕ್ಕ ಸೂಕ್ತ ಉತ್ತರ ನೀಡಬೇಕಾಗಿತ್ತು ಆದರೆ ಹಾಗಾಗಿಲ್ಲ ಎಂದು ಸುಪ್ರಿಯಾ ಶ್ರೀನತೆ ಬೊಟ್ಟು ಮಾಡಿದರು.

ಅಮೆರಿಕ ಪತ್ರಕರ್ತರ ಪ್ರಶ್ನೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಲ್ಪಸಂಖ್ಯಾತರ ತಾರತಮ್ಯದ ಕುರಿತು ಪ್ರಶ್ನೆಯ ಹಿಂದೆ ಹೊರಗಿನ ಪ್ರೇರಣೆ ಇದೆ ಎಂದು ಬಿಜೆಪಿಯ ಅಮಿತ್ ಮಾಳವೀಯ ಆರೋಪಿಸಿದರು. ಒಂದು ಟೂಲ್‍ಕಿಟ್ ತಂಡ ಇದರ ಹಿಂದಿದೆ ಎಂದು ಮಾಳವೀಯ ಹೇಳಿದರು.

ಅಮೆರಿಕ ಸಂದರ್ಶನದಲ್ಲಿ ಪ್ರಧಾನಿ ಜೋ ಬೈಡನ್‍ರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತ
ಭಾರತದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ತಾರತಮ್ಯದ ಕುರಿತು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದರು. ಆದರೆ ಭಾರತದಲ್ಲಿ ಯಾವುದೇ ತಾರತಮ್ಯ ಇಲ್ಲ. ಅದಕ್ಕೆ ಭಾರತದಲ್ಲಿ ಸ್ಥಾನವಿಲ್ಲ ಎಂದು ಮೋದಿ ಹೇಳಿದ್ದರು.

ಭಾರತದ ಡಿಎನ್‍ಎ ಪ್ರಜಾಪ್ರಭುತ್ವ. ಭಾರತದ ನರನಾಡಿಗಳಲ್ಲಿ ಹರಿಯುತ್ತಿದೆ ಎಂದು ಮೋದಿ ಹೇಳಿದ್ದು. ಜಾತಿ ಧರ್ಮ ಲಿಂಗ ಆಧಾರದಲ್ಲಿ ಯಾವುದೇ ತಾರತಮ್ಯ ಇಲ್ಲ . ಮಾನವೀಯ ಮೌಲ್ಯಗಳು ಮತ್ತು ಹಕ್ಕುಗಳು ಸಂರಕ್ಷಿಸಲ್ಪಡದಿರುವ ಯಾವ ದೇಶವೂ ಪ್ರಜಾಪ್ರಭುತ್ವ ಎಂದು ಕರೆಯಲ್ಪಡಲು ಅರ್ಹತೆ ಹೊಂದಿಲ್ಲ ಎಂದು ಮೋದಿ ಉತ್ತರಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಎರಡೇ ಪ್ರಶ್ನೆ ಕೇಳುವುದಕ್ಕೆ ಮಾತ್ರ ಪತ್ರಕರ್ತರಿಗೆ ಅವಕಾಶ ನೀಡಿದ್ದು, ಒಂಬತ್ತು ವರ್ಷದಲ್ಲಿ ಮೋದಿ ಪಾಲ್ಗೊಂಡ ಮೊದಲ ಪತ್ರಿಕಾಗೋಷ್ಠಿ ಬೈಡನ್ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಾಗಿದೆ.