ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜೂ.23: ದೇಶದಲ್ಲಿ ಸಮಾನ ನಾಗರಿಕ ಸಂಹಿತ ಅಗತ್ಯವಿದ್ದು ಅದನ್ನು ಜಾರಿಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಾನೂನು ಆಯೋಗದ ಅಧ್ಯಕ್ಷ ಜಸ್ಟಿಸ್ ಋತುರಾಜ್ ಅವಸ್ಥಿ ಹೇಳಿದರು.
ಮದುವೆ, ವಾರಿಸು ಹಕ್ಕು, ದತ್ತು ತೆಗೆಯುವುದು ಇವೆಲ್ಲದ್ದರಲ್ಲಿಯೂ ಎಲ್ಲರಿಗೂ ಒಂದೇ ಕಾನೂನು ಕಡ್ಡಾಯವಾಗಲಿದೆ ಎಂದು ಜಸ್ಟಿಸ್ ಅವಸ್ಥಿ ಹೇಳಿದರು.
ಸಮಾನ ಸಿವಿಲ್ ಕೋಡ್ ಸಂಬಂಧಿಸಿ ನಾವು ಯಾವ ವರದಿ ಕೊಟ್ಟರೂ ಅದನ್ನು ಕೇಂದ್ರ ಸರಕಾರ ಜಾರಿಗೊಳಿಸುತ್ತದೆ ಎಂದು ಹೇಳ ಬರುವುದಿಲ್ಲ ಎಂದು ಅವಸ್ಥಿ ಹೇಳಿದರು. ಅವರಲ್ಲಿ ಆರ್ ಎಸ್ ಎಸ್ ಹಿಂದುತ್ವ ಅಜೆಂಡ ಬಿಜೆಪಿಯ ಚುನಾವಣೆ ಭರವಸೆ ಸಮಾನ ಸಿವಿಲ್ ಕೋಡ್ ದೇಶದಲ್ಲಿ ಜಾರಿಗೊಳಿಸುವ ಬಗ್ಗೆ ಅಭಿಪ್ರಾಯ ಕೇಳಿದಾಗ ಜಸ್ಟಿಸ್ ಅವಸ್ಥಿತಿ ಅದರ ಅಗತ್ಯ ಇದೆ ಎಂದು ಹೇಳಿದರು.
ಬಿಜೆಪಿಯ ಇನ್ನೊಂದು ಅಜೆಂಡ ಒಂದು ದೇಶ ಒಂದೇ ಚುನಾವಣೆಯನ್ನು ಕಾನೂನು ಆಯೋಗ ಪರಿಗಣಿಸಲಿದೆ.
ಸಮಾನ ಸಿವಿಲ್ಕೋಡ್ ಜಾರಿಗೊಳಿಸುವ ವಿಷಯದಲ್ಲಿ ಹಿಂದುಗಳ ನಡುವೆ ಸಂಕೀರ್ಣವಾದ ಬೇರೆ ಬೇರೆ ಸಂಪ್ರದಾಯಗಳಿವೆ. ಇದು ಸಮಾನ ಸಿವಿಲ್ ಕೋಡಿನಲ್ಲಿ ಒಳಪಡುತ್ತದೆಯೇ ಇಲ್ಲವೇ ಎಂದು ಕೇಳಿದಾಗ ಗೊತ್ತಿಲ್ಲ. ನಾವು ವಿಷಯವನ್ನು ಪರಿಶೀಲಿಸುವ ಕೆಲಸ ಮಾತ್ರ ಮಾಡುತ್ತೇವೆ ಎಂದು ಅವಸ್ಥಿ ಉತ್ತರಿಸಿದರು.
ಸಮಾನ ಸಿವಿಲ್ ಕೋಡ್ ಬೇಕಾ ಎಂದು ಮೊದಲು ಆಯೋಗ ಪರಿಗಣಿಸಲಿದೆ. ಬೇಕಿದ್ದರೆ ಅದಕ್ಕೆ ಅಗತ್ಯವಿರುವ ಕೆಲಸ ಮಾಡುತ್ತದೆ. ಆಯೋಗದ ಶಿಫಾರಸ್ಸು ಸಲಹೆಯಾಗಿದೆ. ಜಾರಿಗೊಳಿಸುವ ಅಧಿಕಾರವಿಲ್ಲ ಎಂದು ಅವಸ್ಥಿ ಹೇಳಿದರು.
ಸುಪ್ರೀಂಕೋರ್ಟು ತಡೆದ ದೇಶದ್ರೋಹ ಆರೋಪ ಮರು ಸ್ಥಾಪಿಸಲು ಕಾನೂನು ಆಯೋಗ ಸಲಹೆ ಕೊಟ್ಟಿರುವುದು ಮತ್ತು ಬಿಜೆಪಿ ಸರಕಾರದ ಹಿಜಾಬ್ ನಿಷೇಧವನ್ನು ಹೈಕೋರ್ಟು ಪೀಠ ಎತ್ತಿ ಹಿಡಿದದ್ದನು ಜಸ್ಟಿಸ್ ಅವಸ್ಥಿ ಸಮರ್ಥಿಸಿಕೊಂಡಿದ್ದಾರೆ.












