ಸನ್ಮಾರ್ಗ ವಾರ್ತೆ
ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ ವತಿಯಿಂದ ಮಂಗಳೂರಿನ ಪದವಿನಂಗಡಿಯಲ್ಲಿ ಪೃಥ್ವಿ ಚಾರಿಟೇಬಲ್ ಟ್ರಸ್ಟ್ ಇವರ ಸಹಕಾರದೊಂದಿಗೆ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟ ಮುರಳೀ ಮೋಹನ್ ಚೂಂತಾರು ಅವರು ಚಾಲನೆ ನೀಡಿದರು. ಸುಮಾರು 25 ಹಣ್ಣಿನ ಗಿಡಗಳನ್ನು ಪದವಿನಂಗಡಿ ಪರಿಸರದ ಕೆ ಹೆಚ್ ಬಿ ಕಾಲೋನಿ ಬೊಂದೆಲ್ ಇಲ್ಲಿನ ಮೈದಾನದ ಸುತ್ತ ನೆಡಲಾಯಿತು.
ಇದೇ ವೇಳೆ ಪರಿಸರ ಪ್ರೇಮಿ ಕ್ರಷ್ಣಪ್ಪ ಅವರು ಮಾತನಾಡಿ, ಪರಿಸರ ಉಳಿಸಲು ಎಲ್ಲರೂ ಕೈ ಜೋಡಿಸಿ ಮತ್ತು ಗಿಡಗಳನ್ನು ನೆಟ್ಟು ಪರಿಸರ ಉಳಿಸಲು ಕಟಿ ಬದ್ಧರಾಗಿ ಎಂದು ಕರೆ ನೀಡಿದರು. ಹಸಿರು ಇಲ್ಲದೆ ಉಸಿರು ಇಲ್ಲ ಎಂದು ನುಡಿದರು.
ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ರಾಮಚಂದ್ರ ಭಟ್, ಅಕ್ಷಯ್ ಶೆನೈ, ಸಂತೋಷ್, ಶೈಲೇಶ್, ಗುರುರಾಜ್ ಹಾಗೂ ಗೃಹ ರಕ್ಷಕರಾದ ಸುನಿಲ್, ದಿವಾಕರ್, ಅರವಿಂದ್, ನಿಖಿಲ್, ರಂಜಿತ್, ಜ್ಞಾನೇಶ,ಕನಕಪ್ಪ ಮುಂತಾದವರು ಉಪಸ್ಥಿತರಿದ್ದರು.












