ವಿವಿಧ ಹೆಸರುಗಳಲ್ಲಿ 15 ಮದುವೆಗಳು; ಮದುವೆಯ ನಂತರ ಚಿನ್ನದೊಂದಿಗೆ ಪರಾರಿಯಾಗುತ್ತಿದ್ದ ಯುವಕನ ಬಂಧನ

0
356

ಸನ್ಮಾರ್ಗ ವಾರ್ತೆ

ಬೆಂಗಳೂರು, ಜು.17: ಪ್ರೀತಿಸುವ ನಾಟಕವಾಡಿ ಮದುವೆ ಆದ ನಂತರ ಮದುಮಗಳ ಚಿನ್ನವನ್ನು ಕದ್ದು ಪರಾರಿಯಾಗುತ್ತಿದ್ದ ಬೆಂಗಳೂರು ಬನಶಂಕರಿಯ ಮಹೇಶ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಈತ ಇದುವರೆಗೆ ಹದಿನೈದು ಮದುವೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗೆ ಮದುವೆಯಾಗುವಾಗ ಈತ ಬೇರೆ ಬೇರೆ ಹೆಸರು ವಿಳಾಸ ನೀಡುತ್ತಿದ್ದ ಎಂಬುದು ತಿಳಿದು ಬಂದಿದೆ.

ವೈದ್ಯ, ಇಂಜಿನಿಯರ್ ಸಹಿತ ಹಲವು ವಿವಿಧ ಐಡಿಗಳನ್ನು ಈತ ಮದುವೆಯಾಗಲು ಬಳಸುತ್ತಿದ್ದ. ಹೆಣ್ಣ ಮಕ್ಕಳನ್ನು ಹೀಗೆ ಪ್ರೀತಿಸಿ ಮದುವೆಯಾಗುವುದು ಮಹೇಶನ ರೀತಿಯಾಗಿದೆ.

ಹೇಮಲತಾ ಎಂಬವರು ನೀಡಿದ ದೂರಿನ ಅಡಿಯಲ್ಲಿ ಮಹೇಶ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದ ನಂತರ ಈತನ ಮೋಸ ಬಯಲಿಗೆ ಬಂದಿದೆ.

ಮ್ಯಾಟ್ರಿಮಾನಿಯಲ್ ಸೈಟ್‍ನಲ್ಲಿ ಮಹೇಶ್ ಹೇಮಲತಾರನ್ನು ಪರಿಚಯಿಸಿಕೊಂಡಿದ್ದ. 2023 ಜನವರಿ ಒಂದರಂದು ಮಹೇಶ್ ಹೇಮಲತಾ ಮದುವೆ ನಡೆದಿತ್ತು. ಇದಾದ ನಂತರ ಹಣ ಚಿನ್ನವನ್ನು ಆತ ವಶಕ್ಕೆ ಪಡೆದು ಕೊಂಡು ತಪ್ಪಿಸಿಕೊಂಡಿದ್ದಾನೆ.

ತನಿಖೆಯಲ್ಲಿ ಮಹೇಶ್ ರಾಜ್ಯದ ಹೊರಗೆ ಹಲವು ಮಹಿಳೆಯರನ್ನು ಮದುವೆಯಾಗಿ ಮೋಸ ಮಾಡಿರುವುದು ಪತ್ತೆಯಾಗಿದೆ. ಹೇಮಲತಾ ದೂರು ಕೊಟ್ಟ ನಂತರ ದಿವ್ಯ ಎಂಬ ಮಹಿಳೆಯೂ ಇವನ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.