ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಮೇಲೆ ಆಸ್ಪತ್ರೆ ಸಿಬ್ಬಂದಿಗಳಿಂದಲೇ ಸಾಮೂಹಿಕ ಅತ್ಯಾಚಾರ!

0
1624

ಮೀರತ್,ಮಾ.25: ಉಸಿರಾಟ ತೊಂದರೆ ಕಾಣಿಸಿಕೊಂಡು ಆಸ್ಪತ್ರೆದಾಖಲಾಗಿ ಐಸಿಯುವಿನಲ್ಲಿರಿಸಲಾಗಿದ್ದ ಮಹಿಳೆಯನ್ನು ಆಸ್ಪತ್ರೆಯ ಸಿಬ್ಬಂದಿಗಳೇ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಉತ್ತರಪ್ರದೇಶದ ಮೀರತ್‍ನ ಆಸ್ಪತ್ರೆಯೊಂದರಲ್ಲಿ ರವಿವಾರ ಘಟನೆ ನಡೆದಿದ್ದು ಈ ಕೃತ್ಯದಲ್ಲಿ ನಾಲ್ವರು ಪುರುಷರು ಮತ್ತು ಓರ್ವ ಮಹಿಳೆ ಭಾಗಿಯಾಗಿದ್ದಾರೆಂದು ಪೊಲೀಸರು ಹೇಳಿದರು. ಚಿಕಿತ್ಸೆಗಾಗಿ ಐಸಿಯುವಿನಲ್ಲಿರಿಸಲಾಗಿದ್ದ ಮಹಿಳೆಗೆ ಇಂಜೆಕ್ಷನ್ ಕೊಟ್ಟು ಮಂಪರಿನಲ್ಲಿರುವಂತೆ ಮಾಡಿ ಮೂರು ಮಂದಿ ಅತ್ಯಾಚಾರ ಮಾಡಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಸಿಟಿವಿ ಕ್ಯಾಮರವನ್ನು ಬಂದ್‍ ಮಾಡಿಡಲಾಗಿತ್ತು. ಮಹಿಳೆಯ ಪತಿ ದೂರು ನೀಡಿದ್ದು ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.