ಕೋಮು ಸಂಘರ್ಷ: ಮಹಾರಾಷ್ಟ್ರದ ಪುಸಾವಲಿಯದಲ್ಲಿ ನಿಷೇಧಾಜ್ಞೆ

0
330

ಸನ್ಮಾರ್ಗ ವಾರ್ತೆ

ಮುಂಬಯಿ, ಸೆ. 13: ರವಿವಾರ ರಾತ್ರೆ ಕೋಮು ಘರ್ಷಣೆ ನಡೆದಿದ್ದ ಅದೇ ಮಹಾರಾಷ್ಟ್ರದ ಸತಾರ ಸಮೀಪದ ಪುಸಾವಲಿ ಗ್ರಾಮದಲ್ಲಿ  ಪರಿಸ್ಥಿತಿ ಈಗ ಶಾಂತವಾಗಿದೆ. ಇಂಟರ್ನೆಟ್ ರದ್ದು ಮತ್ತು ನಿಷೇಧಾಜ್ಞೆ ಮುಂದುರಿಯುತ್ತದೆ ಎಂದು ಪೊಲೀಸರು ತಿಳಿಸಿದರು.

ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಸಾಮಾಜಿಕ ಮಾಧ್ಯಮಗಳ ಪೋಸ್ಟ್ ಗಲಭೆಗೆ ಕಾರಣವಾಗಿದ್ದು ಹಿಂಸಾಚಾರದಲ್ಲಿ ಒಬ್ಬ ಮೃತಪಟ್ಟಿದ್ದು ಹತ್ತು ಮಂದಿ ಗಾಯಗೊಂಡಿದ್ದಾರೆ. ವಾಹನಗಳು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

ಸಾಮಾಜಿಕ ಮಾಧ್ಯಮ ಪೋಸ್ಟಿಗೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿ 23 ಮಂದಿಯನ್ನು ಬಂಧಿಸಲಾಗಿದೆ. ಕೆಲವು ಸಂಘಟನೆಗಳು ಮಂಗಳವಾರ ಮೌನ ಜಾಥ ನಡೆಸಲು ಯತ್ನಿಸಿದರೂ ಅದಕ್ಕೆ ಅನುಮತಿ ನೀಡಿಲ್ಲ ಎಂದು ಪೊಲೀಸರು ತಿಳಿಸಿದರು.