ಸನ್ಮಾರ್ಗ ವಾರ್ತೆ
ಚೆನ್ನೈ,ಸೆ.14: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ದಾರ್ಶನಿಕ ತಿರುವಳ್ಳೂವರ್ ರನ್ನು ಟೀಕಿಸಿದ ಆರೆಸ್ಸೆಸ್ ಚಿಂತಕ ಆರ್ ಬಿ ವಿ ಎಸ್ ಮಣಿಯನ್ರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ತಮಿಳ್ನಾಡಿನ ಆಧ್ಯಾತ್ಮಿಕ ಭಾಷಣಕಾರ ಎಂದು ಪರಿಚಿತರಾಗಿದ್ದು ಈ ವ್ಯಕ್ತಿ ವಿಹಿಂಪದ ನಾಯಕ ಕೂಡ ಆಗಿದ್ದಾರೆ ಎಂದು ವರದಿ ತಿಳಿಸಿದೆ.
ಅಂಬೇಡ್ಕರ್ ಒಬ್ಬ ಪರಿಶಿಷ್ಟ ಜಾತಿ ವ್ಯಕ್ತಿ ಮಾತ್ರ, ಸಂವಿಧಾನ ಶಿಲ್ಪಿ ಎಂದು ಅಂಬೇಡ್ಕರ್ ರನ್ನು ಕರೆಯುವವರಿಗೆ ಹುಚ್ಚು ಎಂದು ಮಣಿಯನ್ ಹೇಳಿದ್ದರು. ಜಾತಿಯ ಮೇಲ್ಮೆಯ ಮಹತ್ವ ವಿವರಿಸಿದ ಮಣಿಯನ್ ಭಾಷಣ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಭಾರತದ ಸಂವಿಧಾನ ಸಿದ್ಧಪಡಿಸಿದ್ದು ಅಂಬೇಡ್ಕರ್ ಎಂದು ಹೇಳುವುದು ಅಸಂಬದ್ಧವಾಗಿದೆ. ಅವರ ಜಾತಿಯನ್ನು ಹೇಳಿದರೆ ಸಾಕು ಎಂದು ಮಣಿಯನ್ ವಾದಿಸಿದ್ದಾರೆ. ಸಂವಿಧಾನ ರಚನಾಕಾರರ ಸಮಿತಿ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಆಗಿದ್ದರು. ಅದರಲ್ಲಿ ಅಂಬೇಡ್ಕರ್ ಗುಮಾಸ್ತನ ಕೆಲಸ ಮಾತ್ರ ಮಾಡಿದ್ದು. ಅವರು ಟೈಪಿಸ್ಟ್ ನಂತೆ ಕೆಲಸ ಮಾಡಿದ್ದು ಎಂದು ಟೀಕಿಸಿದ್ದರು.
ಅಂಬೇಡ್ಕರ್ ರನ್ನು ಪರಿಶಿಷ್ಟ ಜಾತಿಯ ವ್ಯಕ್ತಿಯಾಗಿ ಮಾತ್ರ ಕಾಣಬಹುದಾಗಿದೆ. ಸಂವಿಧಾನ ರಚನೆಯಲ್ಲಿ ಅವರ ಯಾವ ಪಾತ್ರವೂ ಇಲ್ಲ. ಹಲವರು ಮಾಡಿದ ಭಾಷಣಗಳನ್ನು ಅನುವಾದಿಸಿ ಬರೆಯುವಾಗ ತಪ್ಪು ಸಂಭವಿಸದಂತೆ ನೋಡಿಕೊಳ್ಳುವುದು ಅಂಬೇಡ್ಕರ್ ರ ಕೆಲಸವಾಗಿತ್ತು. ತಮಿಳ್ನಾಡಿನಲ್ಲಿ ವಿಸಿಕೆ ನಾಯಕ ತಿರುಮಾವಳವನ್ ತಾನು ಅಂಬೇಡ್ಕರ್ ರ ಜನ ಎಂದು ಹೇಳುವುದಿದ್ದರು ಇಬ್ಬರು ಎರಡು ಜಾತಿಯವರು. ಇಬ್ಬರ ಹೆಸರನ್ನು ಭಾಷಣದಲ್ಲಿ ಮಣಿಯನ್ ಪ್ರಸ್ತಾಪಿಸಿದರು.
ತಮಿಳು ಜನರು ಆರಾಧಿಸುವ ತಿರುವಳ್ಳುವರ್ ಎಂದಿಗೂ ಬದುಕಿರಲಿಲ್ಲ ಎಂದು ಅನೇಕ ಪುಸ್ತಕಗಳ ಲೇಖಕರಾದ ಮಣಿಯನ್ ಹೇಳುತ್ತಾರೆ. ವಿಎಚ್ಪಿಯ ಮಾಜಿ ರಾಜ್ಯಾಧ್ಯಕ್ಷ ಮಣಿಯಾನ್ ಅವರು ಸನಾತನ ಧರ್ಮದ ಅನುಯಾಯಿಗಳು ಮತ್ತು ನರೇಂದ್ರ ಮೋದಿ ಮತ್ತು ಬಿಜೆಪಿಯಿಂದ ಮಾತ್ರ ಭಾರತವನ್ನು ಉಳಿಸಲು ಸಾಧ್ಯ ಎಂದು ಹೇಳಿಕೊಂಡಿದ್ದಾರೆ. ಇವರ ಹೇಳಿಕೆಯನ್ನು ಆಧರಿಸಿ ತಮಿಳ್ನಾಡು ಪೊಲೀಸರು ಮಣಿಯನ್ ರನ್ನು ಬಂಧಿಸಿದ್ದಾರೆ.












