ಕೈ ನೋಡಿ ಸಾಯುವುದಾಗಿ ಹೇಳಿದ ಕೈ ಲಕ್ಷಣದವಳು: ಅವಳೇ ಕೊಟ್ಟ ಚಾಕ್ಲೆಟ್ ತಿಂದು ಯುವತಿ ಸಾವು

0
865

ಸನ್ಮಾರ್ಗ ವಾರ್ತೆ

ಬ್ರಿಝೀಲಿಯ, ಅ.7: ಸಾಯುವುದಾಗಿ ಕೈ ನೋಡಿ ಲಕ್ಷಣ ಹೇಳಿದ ಮಹಿಳೆ ನೀಡಿದ ಚಾಕ್ಲೆಟು ತಿಂದು ಯುವತಿ ಮೃತಪಟ್ಟ ಘಟನೆ ಬ್ರಿಝಿಲ್‍ನಲ್ಲಿ ನಡೆದಿದೆ. ಬ್ರಿಝಿಲಿನ ಯುವತಿ ಫರ್ನಾಂಡ ವಲೊಸ್ ಪಿಂಟೊ (27) ಚಾಕ್ಲೆಟ್ ತಿಂದು ಮೃತಪಟ್ಟ ಯುವತಿಯಾಗಿದ್ದಾಳೆ. ಸಾಯುವ ವೇಳೆ ಯುವತಿಗೆ 27 ವರ್ಷ ವಯಸ್ಸಾಗಿತ್ತು.

ಮೆಸಿಯೊ ನಗರದಲ್ಲಿ ಸಿಕ್ಕಿದ ಮಹಿಳೆಯೊಬ್ಬರು ಪಿಂಟೊಳ ಕೈ ನೋಡಿದ್ದಾಳೆ. ನಂತರ ನಿಮಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ ಎಂದು ಹೇಳಿದ್ದು, ನಂತರ ಒಂದು ಚಾಕ್ಲೆಟ್ ಕೊಟ್ಟಿದ್ದಾಳೆ.  ಆ ನಂತರ ಕೆಲವೇ ಗಂಟೆಗಳ ಕಾಲ ಮಾತ್ರ ಪಿಂಟೊ ಬದುಕಿದ್ದಳು.

ಮಹಿಳೆ ಕೊಟ್ಟ ಚಾಕ್ಲೆಟನ್ನು ಪಿಂಟೋ ಆಗಲೇ ತಿಂದಿದ್ದಾಳೆ ಎಂದು ಅವಳ ಸಂಬಂಧಿಕಳಾದ ಬ್ರಿಯಾಂಕ ಕ್ರಿಸ್ಟಿ ತಿಳಿಸಿದರು. ಉಡುಗೊರೆ ಸಿಕ್ಕಿದ ಚಾಕ್ಲೆಟ್ ತಿಂದ ಮೇಲೆ ಎದೆ ಬಡಿತ ಹೆಚ್ಚಿದ್ದು, ವಾಂತಿ ಮಾಡಿಕೊಂಡಿದ್ದಾಳೆ ಎಂದೂ ಕ್ರಿಸ್ಟಿ ತಿಳಿಸಿದರು. ನಂತರ ತೀರ ವಿವಶಳಾದ ಪಿಂಟೋಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ರಕ್ಷಿಸಲು ಸಾಧ್ಯವಾಗಿಲ್ಲ.

ಪಿಂಟೋಳ ದೇಹದಲ್ಲಿ ವಿಷದಂಶ ಪತ್ತೆಯಾಗಿದೆ ಎಂದು ವೈದ್ಯಕೀಯ ವರದಿ ತಿಳಿಸಿದೆ. ಆ ನಂತರ ಪೊಲೀಸರಿಗೆ ದೂರು ನೀಡಿದ್ದು, ಆಗಸ್ಟ್ ತಿಂಗಳಲ್ಲಿ ಈ ಘಟನೆ ನಡೆದಿದೆ. ಅದರ ವರದಿ ಈಗ ಹೊರಬಂದಿದೆ. ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.