ಸಮಸ್ತದ ಸ್ವತಂತ್ರ ಅಸ್ತಿತ್ವ ಮುಸ್ಲಿಂ ಲೀಗ್ ಅಂಗೀಕರಿಸಲಿ-ಐಎನ್‍ಎಲ್

0
1912

ಸನ್ಮಾರ್ಗ ವಾರ್ತೆ

ಕೋಝಿಕ್ಕೋಡ್: ಸಮಸ್ತದ (ಕೇರಳದ ಮುಸ್ಲಿಂ ವಿದ್ವಾಂಸರ ಸಂಘಟನೆ) ಸ್ವತಂತ್ರ ಅಸ್ತಿತ್ವವನ್ನು ಒಪ್ಪಿಕೊಳ್ಳಲು ಮುಸ್ಲಿಂ ಲೀಗ್ ನಾಯಕತ್ವ ಸಿದ್ಧವಾಗಬೇಕು ಎಂದು ಐಎನ್‌ಎಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಸಿಂ ಇರಕೂರ್ ಆಗ್ರಹಿಸಿದ್ದಾರೆ.

ಸಮಸ್ತ ಸುನ್ನಿಗಳ ಅಧಿಕೃತ ವಿದ್ವಾಂಸ ಸಂಘಟನೆಯಾಗಿದೆ. ಅದು ಪಾರ್ಟಿ ಅಧೀನ ಘಟಕ ಎಂದು ಕೆಲವು ಲೀಗ್ ನವರು ತಿಳಿದಿದ್ದರೆ ಅದು ಅವರ ಅರಿವಿನ ಕೊರತೆ ಮಾತ್ರ ಆಗಿದೆ. ಈಗ ಆಗುತ್ತಿರುವ ಅಸಾಮರಸ್ಯಕ್ಕೆ ಇದು ಕಾರಣ ಎಂದು ಅವರು ಹೇಳಿದರು.

ಸಮಸ್ತದ ಅಂತಸ್ಸುಯುಕ್ತ ಅಸ್ತಿತ್ವ, ವ್ಯಕ್ತಿತ್ವ ಎತ್ತಿ ಹಿಡಿಯಲು ಜಿಫ್ರಿ ಮುತ್ತುಕೋಯ ತಂಙಳ್ ಕೈಗೊಂಡ ಕ್ರಮಗಳು  ಲೀಗ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಆದುದರಿಂದ ಜಿಫ್ರಿ ತಂಙಳ್‍ರ  ಮೇಲೆ ವೈಯಕ್ತಿಕ ಟೀಕೆ ಮಾಡುತ್ತಿರುವುದಾಗಿದೆ. ಲೀಗಿನ ಮನ್ನಣೆಗೆ ಅಸ್ಪೃಶ್ಯವಾದ ಈ ನಿಲುವಿನ ವಿರುದ್ಧ ಮುಸ್ಲಿಮ್ ಸಮಾಜ ಒಗ್ಗಟ್ಟಿನಲ್ಲಿ  ಮುಂದೆ ಬರಬೇಕಾಗಿದೆ ಎಂದು ಕಾಸಿಮ್ ಇರಕ್ಕೂರ್ ಹೇಳಿಕೆಯಲ್ಲಿ ತಿಳಿಸಿದರು.