ಸನ್ಮಾರ್ಗ ವಾರ್ತೆ
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಡಿಸೆಂಬರ್ 08 ರವರೆಗೆ ವಿಸ್ತರಿಸಲಾಗಿದೆ.
2023-24 ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ(State Scholarship Portal-SSP)ದಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ನಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿತ್ತು ಇದರ ಕೊನೆಯ ದಿನಾಂಕವನ್ನು 08 ಡಿಸೆಂಬರ್ 2023 ರವರೆಗೆ ವಿಸ್ತರಿಸಲಾಗಿದೆ.
👉🏻ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ
01 ರಿಂದ 08 ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ
ಅರ್ಜಿ ಸಲ್ಲಿಸಲು ಅವಶ್ಯಕವಾದ ದಾಖಲೆಗಳು :
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವಿದ್ಯಾರ್ಥಿಯ ಸ್ಯಾಟ್ಸ್(SATs) ಸಂಖ್ಯೆ
- ವಿದ್ಯಾರ್ಥಿಯ ಪೊಷಕರ ಆಧಾರ್ ಕಾರ್ಡ್
🔎 ಹೆಚ್ಚಿನ ಮಾಹಿತಿಗಾಗಿ/ಅರ್ಜಿ ಸಲ್ಲಿಸಲು ಸಂಪರ್ಕಿಸಿ:
ನಾಗರಿಕ ಸೇವಾ ಕೇಂದ್ರ, ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್
ಹಿದಾಯತ್ ಸೆಂಟರ್,
ಬೀಬಿ ಅಲಾಬಿ ರೋಡ್,
ಬಂದರ್, ಮಂಗಳೂರು.
☎ : 87227 60795













