ಸನ್ಮಾರ್ಗ ವಾರ್ತೆ
2023-24ನೇ ಸಾಲಿನ ಅಲ್ಪಸಂಖ್ಯಾತರ ಕೌಶಲ್ಯ ಅಭಿವೃದ್ಧಿ ಯೋಜನೆ ಅರ್ಜಿ (Basic and Advanced Courses) ( ರಾಮನಗರ, ದಕ್ಷಿಣ ಕನ್ನಡ, ಬೆಳಗಾವಿ, ದಾವಣಗೆರೆ ಮತ್ತು ಕಲಬುರಗಿ ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ)
ರಾಮನಗರ, ದಕ್ಷಿಣ ಕನ್ನಡ, ಬೆಳಗಾವಿ, ದಾವಣಗೆರೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರ ಸಮುದಾಯಕ್ಕೆ ಒಳಪಡುವ ವಿದ್ಯಾವಂತ ನಿರುದ್ಯೋಗಿ ಯುವಕ/ ಯುವತಿಯರಿಗೆ Basic and Advanced Courses ನಲ್ಲಿ ಉಚಿತವಾಗಿ ಅಲ್ಪಾವಧಿ ವಿವಿಧ ಕ್ಷೇತ್ರಗಳ ಕೌಶಲ್ಯ ತರಬೇತಿಯನ್ನು ನೀಡಿ ಸ್ವಾವಲಂಬನೆ ಜೀವನ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುವುದಾಗಿದೆ.
ಅರ್ಹತೆಗಳು:👇🏻
- ರಾಮನಗರ, ದಕ್ಷಿಣ ಕನ್ನಡ, ಬೆಳಗಾವಿ, ದಾವಣಗೆರೆ ಮತ್ತು ಕಲಬುರಗಿ ಜಿಲ್ಲೆಗಳ ನಿವಾಸಿಯಾಗಿರಬೇಕು.
- ತರಬೇತಿ ಮುಂದೆ ನಮೂದಿಸಿರುವಂತೆ ನಿಗಧಿಪಡಿಸಿರುವ ವಿದ್ಯಾರ್ಹತೆ ಪೂರ್ಣಗೊಂಡಿರಬೇಕು.
- ಅರ್ಜಿದಾರರ ವಯೋಮಿತಿ 18 ರಿಂದ 35 ವರ್ಷಗಳು.
- ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದವರಾಗಿರಬೇಕು.
- ಎಲ್ಲಾ ಮೂಲಗಳಿಂದ ಕುಟುಂಬದ ಆದಾಯ ರೂ.8.00 ಲಕ್ಷಗಳಿಗಿಂತ ಮೀರಿರಬಾರದು.
ಸಲ್ಲಿಸಬೇಕಾದ ದಾಖಲೆಗಳು👇🏻:
- ಇತ್ತೀಚಿನ 02 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.
- ತಹಶೀಲ್ದಾರವರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
- ಆಧಾರ ಕಾರ್ಡ್ ಪ್ರತಿ.
- ವಿದ್ಯಾರ್ಹತೆಯ ಅಂಕಪಟ್ಟಿ ಪ್ರತಿ.
ಅರ್ಜಿ ಸಲ್ಲಿಸಲು ಕೊನೆಯ ದಿನ : 05 ಜನವರಿ 2024
🔎 ಹೆಚ್ಚಿನ ಮಾಹಿತಿಗಾಗಿ/ ಅರ್ಜಿ ಸಲ್ಲಿಸಲು ಸಂಪರ್ಕಿಸಿ:
ನಾಗರಿಕ ಸೇವಾ ಕೇಂದ್ರ,
ಸಮಾಜ ಸೇವಾ ಘಟಕ,
ಜಮಾಅತೆ ಇಸ್ಲಾಮೀ ಹಿಂದ್
ಹಿದಾಯತ್ ಸೆಂಟರ್,
ಬೀಬಿ ಅಲಾಬಿ ರೋಡ್,
ಬಂದರ್, ಮಂಗಳೂರು.
☎ : 87227 60795












