ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರಿಗೆ ಚಪ್ಪಲಿ ಎಸೆತ – ವೀಡಿಯೋ ವೈರಲ್

0
589

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶ: ಪ್ರಧಾನಿ ಮೋದಿ ಸಂಚರಿಸುತ್ತಿದ್ದ ಕಾರಿಗೆ ಚಪ್ಪಲಿ ಎಸೆದ ಘಟನೆ ವರದಿಯಾಗಿದ್ದು ಭಾರೀ ಭದ್ರತಾ ಲೋಪ ಸಂಭವಿಸಿದೆ.

ಪ್ರಧಾನಿ ಮೋದಿಯವರ ಸ್ವಕ್ಷೇತ್ರವಾದ ವಾರಣಾಸಿಯಲ್ಲಿ ಬುಲೆಟ್ ಪ್ರೂಫ್ ಕಾರಿನ ಮೇಲೆ ಚಪ್ಪಲಿ ಎಸೆದಿರುವ ವಿಡಿಯೋ ವೈರಲಾಗಿದ್ದು ಮೋದಿಗೆ ತೀವ್ರ ಮುಂಖಭಂಗವುಂಟಾಗಿದೆ. ಭದ್ರತಾ ಸಿಬ್ಬಂದಿ ಅದನ್ನು ತ್ವರಿತವಾಗಿ ಅದನ್ನು ತೆರವುಗೊಳಿಸುತ್ತಿರುವುದು ವಿಡಿಯೋದಲ್ಲಿದೆ.

2024ರ ಲೋಕಸಭೆ ಚುನಾವಣೆಯ ನಂತರ ಪ್ರಧಾನಿಯವರ ಮೊದಲ ಭೇಟಿ ಇದಾಗಿದ್ದು, ಭದ್ರತಾ ಲೋಪದ ಬಗ್ಗೆ ತನಿಖೆಗಳು ಪ್ರಾರಂಭವಾಗಿದೆ.

https://x.com/nabilajamal_/status/1803454767139790874?t=zDtrvGNLisjvgOvPT8u05w&s=19