ಹಜ್ ಮುಕ್ತಾಯ, ಉಮ್ರಾಕ್ಕೆ ಸಿದ್ಧತೆ: ವೀಸಾ ಹಂಚಿಕೆ ಆರಂಭಿಸಿದ ಸೌದಿ ಸಚಿವಾಲಯ

0
206

ಸನ್ಮಾರ್ಗ ವಾರ್ತೆ

ಉಮ್ರಾ ಮಾಡಬಯಸುವವರು ಅದಕ್ಕಾಗಿ ಸಿದ್ಧತೆ ನಡೆಸಿಕೊಳ್ಳಬಹುದು. ಹೊಸ ಸೀಸನ್ ನ ಉಮ್ರಾ ವಿಸಾಗಳನ್ನು ಸೌದಿ ಹಜ್ ಉಮ್ರಾ ಸಚಿವಾಲಯ ನೀಡತೊಡಗಿದೆ. ಇನ್ನು ಮುಂದೆ ಉಮ್ರಾಕ್ಕಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಬಹುದು ಎಂದು ಸಚಿವಾಲಯ ತಿಳಿಸಿದೆ.

ಸೌದಿಯ ನಾಗರಿಕರು ಜೂನ್ 22 ಶನಿವಾರದಿಂದಲೇ ಉಮ್ರಾ ಕರ್ಮಗಳನ್ನು ನಿರ್ವಹಿಸಲು ಪ್ರಾರಂಭಿಸಿದ್ದಾರೆ. ಹಜ್ ಸೀಸನ್ ಕೊನೆಗೊಂಡ ತಕ್ಷಣವೇ ಉಮ್ರಾ ವೀಸಾಗಳನ್ನು ನೀಡಲು ಸೌದಿ ಅರೇಬಿಯಾ ಪ್ರಾರಂಭಿಸಿದೆ.

ನುಸುಕ್ ಆಪ್ ನ ಮೂಲಕ ಲಭ್ಯ ಸಮಯಗಳಲ್ಲಿ ಪರ್ಮಿಟ್ ಪಡೆದು ಯಾರಿಗೂ ಉಮ್ರಾ ನಿರ್ವಹಿಸಲು ಮಕ್ಕಾಕ್ಕೆ ಬರಬಹುದಾಗಿದೆ. ಹಾಗೆಯೇ ಮದೀನಾದ ರೌಲಾ ಶರೀಫ್ ಸಂದರ್ಶನಕ್ಕೂ ಪರ್ಮಿಟ್ ಅನ್ನು ನೀಡಲಾಗುತ್ತಿದೆ.

ಆದರೆ ಮಕ್ಕಾ ಮತ್ತು ಮದೀನಾದಲ್ಲಿ ಹಜ್ಜ್ ತೀರ್ಥ ಯಾತ್ರಿಗಳು ಈಗಲೂ ಇರುವುದರಿಂದ ಸೀಮಿತ ನೆಲೆಯಲ್ಲಿ ಪರ್ಮಿಟ್ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಜನನಿಬಿಡತೆಯನ್ನು ತಡೆಯುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.