ಇಸ್ರೇಲ್ ದೌರ್ಜನ್ಯ ವಿರುದ್ಧ ಎಸ್ ಐ ಓ ನಡೆಸುತ್ತಿರುವ ಹೋರಾಟವನ್ನು ಶ್ಲಾಘಿಸಿದ ಫೆಲೆಸ್ತೀನ್ ರಾಯಭಾರಿ

0
452

ಸನ್ಮಾರ್ಗ ವಾರ್ತೆ

ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಮತ್ತು ಜನಾಂಗೀಯ ಹತ್ಯೆಯನ್ನು ಖಂಡಿಸಿ ಎಸ್ ಐ ಓ ತನ್ನ ಮಿತಿಯೊಳಗೆ ನಡೆಸುತ್ತಿರುವ ಹೋರಾಟವನ್ನು ಭಾರತದಲ್ಲಿರುವ ಫೆಲಸ್ತೀನಿ ರಾಯಭಾರಿ ಅದ್ನಾನ್ ಅಬು ಹಲ್ ಹೈಜಾ ಶ್ಲಾಘಿಸಿದ್ದಾರೆ. ಈ ಕುರಿತಂತೆ ತನ್ನ ಅಭಿಮಾನವನ್ನು ತೆಲಂಗಾಣ ಎಸ್ ಐ ಓಗೆ ಪತ್ರದ ಮೂಲಕ ತಿಳಿಸಿದ್ದಾರೆ.

ಎಸ್ ಐ ಓ ತೆಲಂಗಾಣವು ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ಹತ್ಯೆ ದೌರ್ಜನ್ಯಗಳ ಬಗ್ಗೆ ಅತ್ಯಂತ ಪರಿಣಾಮಕಾರಿ ಪ್ರತಿಭಟನೆಯನ್ನು ನಡೆಸಿದೆ ಎಂಬುದು ತನ್ನ ಅರಿವಿಗೆ ಬಂದಿದೆ ಎಂದವರು ತೆಲಂಗಾಣ ಎಸ್ ಐ ಓ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸತ್ಯ ಮತ್ತು ನ್ಯಾಯವನ್ನು ಎತ್ತಿ ಹಿಡಿಯುವುದಕ್ಕಾಗಿ ವಿದ್ಯಾರ್ಥಿಗಳು ನಡೆಸುತ್ತಿರುವ ಈ ಪ್ರಯತ್ನಕ್ಕೆ ನಾನು ಆಭಾರಿಯಾಗಿದ್ದೇನೆ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.