ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಎಲ್ಲಿದ್ದಾರೆ? ಇಬ್ಬರು ಅಥವಾ ಮೂವರನ್ನು ಹೊರತುಪಡಿಸಿ ಯಾರಿಗೂ ತಿಳಿದಿಲ್ಲ: ವರದಿ

0
211

ಸನ್ಮಾರ್ಗ ವಾರ್ತೆ

ಹಮಾಸ್ ನಾಯಕ ಯಹ್ಯಾ ಸಿನ್ವಾರ್ ಅವರು ಎಲ್ಲಿದ್ದಾರೆ ಎಂಬುದು ಎರಡು ಅಥವಾ ಮೂರು ಮಂದಿಯ ಹೊರತು ಇನ್ನಾರಿಗೂ ಗೊತ್ತಿಲ್ಲ ಎಂದು ವರದಿಗಳು ಹೇಳುತ್ತಿವೆ. ಲಂಡನ್ ಮೂಲದ ಪತ್ರಿಕೆಯು ಹಮಾಸ್ ಮಾಹಿತಿಯನ್ನು ಆಧರಿಸಿ ಈ ವರದಿ ಮಾಡಿದೆ.

ಎರಡು ಅಥವಾ ಮೂರು ಮಂದಿಗೆ ಮಾತ್ರ ಅವರು ಎಲ್ಲಿದ್ದಾರೆ ಎಂಬುದು ಗೊತ್ತಿದೆ. ಅವರೇ ಅವರ ಜೊತೆಗೆ ಸಂಪರ್ಕದಲ್ಲಿದ್ದಾರೆ. ಅವರ ಅಭಿಪ್ರಾಯ ಮತ್ತು ವಿದೇಶದಲ್ಲಿರುವ ಹಮಾಸ್ ನಾಯಕರ ನಡುವಿನ ಅಭಿಪ್ರಾಯಗಳನ್ನು ಅವರು ಪರಸ್ಪರ ಹಂಚಿಕೊಳ್ಳುತ್ತಾರೆ ಎಂದು ವರದಿ ತಿಳಿಸಿದೆ.

ಹಮಾಸ್ ನ ರಾಜಕೀಯ ಮತ್ತು ಸೇನಾ ಮುಖ್ಯಸ್ಥರಲ್ಲಿ ಪ್ರಮುಖರನ್ನು ಪತ್ತೆ ಹಚ್ಚಲು ಇಸ್ರೇಲ್ ಈಗಲೂ ವಿಫಲವಾಗಿದೆ. ಇವರಲ್ಲಿ ಕೆಲವರ ಮೇಲೆ ದಾಳಿ ನಡೆಸಲಾಗಿದೆ, ಕೆಲವರಿಗೆ ಗಾಯಗಳಾಗಿವೆ ಮತ್ತು ಕೆಲವರು ಸುರಕ್ಷಿತವಾಗಿದ್ದಾರೆ ಎಂಬ ವರದಿಯೂ ಇದೆ. ಆದರೆ ಇವರಲ್ಲಿ ಸಿನ್ವಾರ್ ಇಲ್ಲ ಎಂದು ವರದಿ ತಿಳಿಸಿದೆ.