ಸನ್ಮಾರ್ಗ ವಾರ್ತೆ
ಫೆಲೆಸ್ತೀನಿಗೆ ಬೆಂಬಲ ಸೂಚಿಸುವ ಸಂಕೇತವಾಗಿ ಕಫಿಯಾ ಧರಿಸಿ ಪದವಿ ಪ್ರಧಾನ ಸಮಾರಂಭಕ್ಕೆ ಬಂದ ವಿದ್ಯಾರ್ಥಿಗೆ ಪದವಿ ಪ್ರಧಾನ ಮಾಡದ ಘಟನೆ ಹೈದರಾಬಾದ್ ನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ನಲ್ಲಿ ನಡೆದಿದೆ.
ಟಿಸ್ ಎಂಬ ಹೆಸರಲ್ಲಿ ಗುರುತಿಸಿಕೊಂಡಿರುವ ಈ ವಿದ್ಯಾಲಯದ ಕ್ಯಾಂಪಸ್ ನಲ್ಲಿ ಈ ಪದವಿ ಪ್ರಧಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಅಬಲಾಸ್ ಮೊಹಮ್ಮದ್ ಎಂಬ ವಿದ್ಯಾರ್ಥಿ ಕಫಿಯಾ ದರಿಸಿ ವೇದಿಕೆಗೆ ಬಂದಾಗ ಉಪಕುಲಪತಿ ಪ್ರೊಫೆಸರ್ ಶಂಕರ್ ದಾಸ್ ಅವರು ಪದವಿ ಪ್ರದಾನ ಮಾಡಲು ನಿರಾಕರಿಸಿದರು.
ಫೆಲೆಸ್ತೀನ್ ಪರ ಸಂಕೇತವಾಗಿರುವ ಕಪ್ಪು ಮತ್ತು ಬಿಳಿ ಬಣ್ಣದ ಶಿರ ವಸ್ತ್ರವನ್ನು ಧರಿಸಿ ಪದವಿ ಸ್ವೀಕರಿಸಲು ಈ ಅಬ್ಲಾಸ್ ಮೊಹಮ್ಮದ್ ವೇದಿಕೆಗೆ ಬಂದಿದ್ದರು. ಆದರೆ ಬಿರುದು ಸರ್ಟಿಫಿಕೇಟ್ ನೀಡಲು ವಯ್ಸ್ ಚಾನ್ಸಲರ್ ಪ್ರೊಫೆಸರ್ ಶಂಕರ್ ದಾಸ್ ನಿರಾಕರಿಸಿ ನನ್ನನ್ನು ಅವಮಾನಿಸಿದರು ಎಂದು ಮೊಹಮ್ಮದ್ ಹೇಳಿದ್ದಾರೆ.
ಕಫಿಯಾ ಧರಿಸುವುದು ಕ್ಯಾಂಪಸ್ ನಿಯಮಾವಳಿಗೆ ವಿರುದ್ಧ ಎಂದು ಅಧಿಕಾರಿಗಳು ಹೇಳಿರುವುದಾಗಿ ಮೊಹಮ್ಮದ್ ತಿಳಿಸಿದ್ದಾರೆ. ಹೀಗೆ ಹೇಳಿ ತನಗೆ ಬಿರುದು ಪ್ರಧಾನವನ್ನು ನಿರಾಕರಿಸಿದ್ದಾರೆ ಎಂದವರು ಹೇಳಿದ್ದಾರೆ.












