ಭಾರತ ಮತ್ತು ಪಾಕಿಸ್ತಾನ ಒಂದೇ. ಗಡಿಗಳು ರಾಜಕಾರಣಿಗಳ ಸೃಷ್ಟಿ; ಗಾಯಕ ದಿಲ್ಜಿತ್ ದೋಸಂಜೆ

0
98

ಸನ್ಮಾರ್ಗ ವಾರ್ತೆ

ಭಾರತ ಮತ್ತು ಪಾಕಿಸ್ತಾನ ಎರಡೂ ಒಂದೇ ರಾಷ್ಟ್ರವಾಗಿದೆ. ಇದರ ನಡುವೆ ಗಡಿಯನ್ನು ಮಾಡಿದವರು ರಾಜಕಾರಣಿಗಳಾಗಿದ್ದಾರೆ. ಪಂಜಾಬಿನಲ್ಲಿ ನಾವು ಎಲ್ಲರನ್ನೂ ಪ್ರೀತಿಸುತ್ತೇವೆ ಎಂದು ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೋಸಂಜೆ ಹೇಳಿದ್ದಾರೆ.

ಲಂಡನ್ನಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಕಿಸ್ತಾನಿ ಅಭಿಮಾನಿಗೆ ಬಹುಮಾನವನ್ನು ನೀಡಿದ ಬಳಿಕ ಗಾಯಕ ಈ ಹೇಳಿಕೆ ನೀಡಿದ್ದಾರೆ. ಗಡಿ ರಹಿತವಾಗಿ ಎರಡು ದೇಶದವರು ಪ್ರೀತಿಸಬೇಕಾದ ಅಗತ್ಯದ ಬಗ್ಗೆ ಈ ಗಾಯಕ ಹೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ.

ಅಭಿಮಾನಿ ಪಾಕಿಸ್ತಾನಿಯರೆಂದು ಅವರಿಗೆ ಗೊತ್ತಾಯ್ತು, ತಕ್ಷಣ ಅವರು ತನ್ನ ಮನದ ಭಾವನೆಯನ್ನು ತೆರೆದಿಟ್ಟರು.

ನನ್ನ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಒಂದೇ ಆಗಿದೆ. ನಮ್ಮ ನಡುವೆ ಗಡಿಯನ್ನು ಮಾಡಿದವರು ರಾಜಕಾರಣಿಗಳು. ಭಾರತದಿಂದ ಬಂದವರು ಮತ್ತು ಪಾಕಿಸ್ತಾನದಿಂದ ಬಂದ ಎಲ್ಲರಿಗೂ ಈ ಕಾರ್ಯಕ್ರಮಕ್ಕೆ ಸ್ವಾಗತ. ನಾನು ಸಂಗೀತದ ಮೂಲಕ ಜನರನ್ನು ಒಂದುಗೂಡಿಸಿದ್ದೇನೆಯೇ ಹೊರತು ರಾಷ್ಟ್ರೀಯತೆಯ ಹೆಸರಲ್ಲಿ ಅಲ್ಲ ಎಂದು ದಿಲ್ಜಿತ್ ಹೇಳಿದ್ದಾರೆ. ಅವರ ಈ ಮಾತನ್ನು ಸಭಿಕರು ಭಾರಿ ಕರತಾಡನದೊಂದಿಗೆ ಬೆಂಬಲಿಸಿದರು.