ಲೆಬನಾನ್‌ ವಿರುದ್ಧ ನಿರಂತರ ಇಸ್ರೇಲ್ ವಾಯುದಾಳಿ : 800 ಕ್ಕೂ ಹೆಚ್ಚು ಸಾವು

0
129

ಸನ್ಮಾರ್ಗ ವಾರ್ತೆ

ಬೈರೂತ್: ಸೆಪ್ಟೆಂಬರ್ 23 ರಿಂದ ಲೆಬನಾನ್ ವಿರುದ್ಧ ಇಸ್ರೇಲ್ ನಡೆಸಿದ ವಾಯುದಾಳಿಯ ಪರಿಣಾಮವಾಗಿ ಕನಿಷ್ಠ 816 ಮಂದಿ ಮೃತಪಟ್ಟಿದ್ದು ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಮಾತ್ರವಲ್ಲದೆ, 2,507 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ವರದಿ ಬಿಡುಗಡೆಗೊಳಿಸಿದೆ.

ಕಳೆದ ಅಕ್ಟೋಬರ್‌ನಿಂದ ಎರಡು ಕಡೆಗಳ ನಡುವಿನ ಗಡಿ ದಾಟುವ ಯುದ್ಧದ ಮುಂದುವರಿಕೆಯಾಗಿ ಇಸ್ರೇಲಿ ಸೇನೆಯು ಹಿಜ್ಬುಲ್ಲಾವನ್ನು ಗುರಿಯಾಗಿಸಿ ಭಾರೀ ವಾಯುದಾಳಿ ನಡೆಸುತ್ತಿದೆ ಎಂದು ಅನಡೋಲು ಸಂಗ್ರಹಿಸಿದ ಅಂಕಿಅಂಶಗಳು ಬಹಿರಂಗ ಪಡಿಸಿದೆ.

ಇಸ್ರೇಲ್ ಸೇನೆಯು ಲೆಬನಾನ್‌ನಲ್ಲಿ ವಿವಿಧ ಪ್ರದೇಶಗಳಲ್ಲಿ ಏರ್‌ಸ್ಟ್ರೈಕ್‌ಗಳನ್ನು ಮುಂದುವರಿಸುತ್ತಿರುವಂತೆ ಈ ಅಂಕಿಅಂಶವು ಹೆಚ್ಚುವ ಸಾಧ್ಯತೆಯಿದೆ.