ಮೋದಿಯ ಮಾನಸಿಕ ಸ್ವಾಸ್ಥ್ಯ ಕೆಟ್ಟಿದೆ, ಚಿಕಿತ್ಸೆ ಕೊಡಿಸಬೇಕು- ಸಿಎಂ ಭೂಪೇಶ್ ಬಘೇಲ್ ವ್ಯಂಗ್ಯ

0
730

ರಾಯ್‍ಪುರ,ಮೇ 7: ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿರುದ್ಧ ಕೀಳ್ಮಟ್ಟದ ಹೇಳಿಕೆ ನೀಡಿದ ಮೋದಿಯನ್ನು ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕಟುವಾಗಿ ಟೀಕಿಸಿದರು. ಮೋದಿ ಮಾನಸಿಕ ಸ್ಥಿಮಿತ ಕಳಕೊಂಡಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ಬಘೇಲ್ ಪತ್ರಕರ್ತರಿಗೆ ತಿಳಿಸಿದರು.ಮೂರು ಗಂಟೆ ಮಾತ್ರ ನಿದ್ದೆ ಸಿಗುತ್ತದೆ ಎಂದು ಅವರೇ ಹೇಳಿದ್ದಾರೆ. ಹೀಗೆ ನಿದ್ದೆ ಗೆಟ್ಟರೆ ಮಾನಸಿಕ ಸ್ಥಿತಿ ಏರುಪೇರಾಗುತ್ತದೆ ಎಂದು ಬಘೇಲ್ ವ್ಯಂಗ್ಯವಾಡಿದರು.

ರಾಹುಲ್ ಗಾಂಧಿಯ ವಿರುದ್ಧ ಟೀಕೆ ಮಾಡುತ್ತ ಅವರ ತಂದೆ ರಾಜೀವ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದರು. ಪ್ರಶಂಸಕರು ಪರಿಶುದ್ಧ ವ್ಯಕ್ತಿ ಎಂದು ತಮ್ಮ ತಂದೆಯನ್ನು ಹೇಳಿದರೂ ಅವರ ಅಂತ್ಯ ಭ್ರಷ್ಟಾಚಾರಿಯಾಗಿ ನಡೆದಿತ್ತು ಎಂದು ಉತ್ತರ ಪ್ರದೇಶದಲ್ಲಿ ಮೋದಿ ಭಾಷಣ ಮಾಡಿದ್ದರು. 1980ರ ಬೊಫೋರ್ಸ್ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣವನ್ನು ಉಲ್ಲೇಖಿಸಿ ಮೋದಿ ಈ ರೀತಿ ಹೇಳಿದ್ದರು. ಆದರೆ ಕರ್ಮಫಲ ಮೋದಿಯನ್ನು ಕಾದಿವೆ ಎಂದು ರಾಹುಲ್ ಅದಕ್ಕೆ ಉತ್ತರ ನೀಡಿದರು, ಮೋದಿ ಬುದ್ಧಿಭ್ರಮಣೆಯಾಗಿದೆ. ಅಮೇಠಿಯ ಜನರು ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದರು.