ವಿವಿಪ್ಯಾಟ್ ಕುರಿತ ಮರುಪರಿಶೀಲನಾ ಅರ್ಜಿ ತಿರಸ್ಕೃತ

0
479

ಹೊಸದಿಲ್ಲಿ,ಮೇ 7: ವಿವಿಪ್ಯಾಟ ಕುರಿತ ತೀರ್ಪನ್ನು ಮರುಪರಿಶೀಲಿಸಬೇಕೆಂದು ಆಗ್ರಹಿಸಿ 21 ಪ್ರತಿಪಕ್ಷಗಳು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟು ತಿರಸ್ಕರಿಸಿದೆ. ಚಿಫ್ ಜಸ್ಟಿಸ್ ರಂಜನ್ ಗೊಗೊಯ್ ಅಧ್ಯಕ್ಷತೆಯ ಪೀಠ ಅರ್ಜಿ ತಿರಸ್ಕರಿಸಿತು. ತೀರ್ಪಿನ ಮರುಪರಿಶೀಲನೆ ಬಯಸಿಲ್ಲ ಎಂದು ಚೀಫ್ ಜಸ್ಟಿಸ್ ತಿಳಿಸಿದರು. ಒಂದು ವಿಧಾನಸಭಾ ಕ್ಷೇತ್ರದ ಐದು ಬೂತ್‍ಗಳ ವಿವಿಪ್ಯಾಟ ಎಣಿಸಿದರೆ ಅಂತಹ ಪ್ರಯೋಜನವಾಗದೆ. ಈ ಲೋಕಸಭಾ ಚುನಾವಣೆಯ ಮತ ಎಣಿಕೆಯ ವೇಳೆ ಶೇ. 50ರಷ್ಟು ವಿವಿಪ್ಯಾಟಗಳನ್ನು ಲೆಕ್ಕಮಾಡಬೇಕೆಂದು ಪ್ರತಿಪಕ್ಷಗಳು ಬೇಡಿಕೆ ಇರಿಸಿದ್ದವು.

ಆದರೆ ಎಪ್ರಿಲ್ ಎಂಟು ತಾರೀಕಿಗೆ ಕೋರ್ಟು ಹೊರಡಿಸಿದ ತೀರ್ಪಿನಲ್ಲಿ ಒಂದು ವಿಧಾನಸಭಾ ಕ್ಷೇತ್ರದ ಐದು ಮತಗಟ್ಟೆಯ ಮಾತ್ರ ವಿವಿಪ್ಯಾಟ ಎಣಿಕೆ ಮಾಡಿದರೆ ಸಾಕು ಎಂದು ಸುಪ್ರೀಂಕೋರ್ಟು ತೀರ್ಪು ನೀಡಿತ್ತು. ಇದನ್ನು ಪರಿಶೀಲಿಸಬೇಕೆಂದು 21 ಪ್ರತಿಪಕ್ಷಗಳು ಅರ್ಜಿಸಲ್ಲಿಸಿದ್ದವು. ಒಂದು ವಿಧಾನಸಭಾ ಕ್ಷೇತ್ರದ ಒಂದು ಬೂತಿನ ವಿವಿಪ್ಯಾಟವನ್ನು ಮಾತ್ರ ಎಣಿಸುತ್ತೇವೆ ಎಂದು ಆಯೋಗ ತಿಳಿಸಿತ್ತು. ಆದರೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳ ತಲಾ ಐದು ವಿವಿಪ್ಯಾಟಗಳನ್ನು ಎಣಿಕೆ ಮಾಡಬೇಕೆಂದು ಎಪ್ರಿಲ್ ಎಂಟಕ್ಕೆ ಕೋರ್ಟು ತೀರ್ಪು ನೀಡಿ ಆದೇಶಿಸಿತ್ತು.