ಟ್ರಂಪ್ ಗೆ 75 ಮಿಲಿಯನ್ ಡಾಲರ್ ನೀಡಿದ ಎಲೋನ್ ಮಸ್ಕ್: ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ಸಾಧ್ಯತೆ

0
83

ಸನ್ಮಾರ್ಗ ವಾರ್ತೆ

ಜಗತ್ತಿನ ನಂಬರ್ ಒನ್ ಶ್ರೀಮಂತರಾಗಿರುವ ಇಲೋನ್ ಮಸ್ಕ್ ಅವರು ಅಮೇರಿಕಾದ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಖರ್ಚಿಗಾಗಿ 75 ಮಿಲಿಯನ್ ಡಾಲರ್ ಮೊತ್ತವನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಇವರು ಎಕ್ಸ್ ಜಾಲತಾಣದ ಮಾಲೀಕರೂ ಆಗಿದ್ದಾರೆ.

ಟ್ರಂಪ್ ಅವರ ಚುನಾವಣಾ ಭಾಷಣದ ವೇದಿಕೆಯಲ್ಲಿ ಎಲೋನ್ ಮಸ್ಕ್ ಅವರು ಈಗಾಗಲೇ ಕಾಣಿಸಿಕೊಂಡಿದ್ದಾರೆ ಮತ್ತು ಅವರ ಎದುರಾಳಿ ಕಮಲಾ ಹ್ಯಾರಿಸ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಬಾರಿ ಬಾರಿಗೂ ಕಾಲೆಳೆದಿದ್ದಾರೆ.

ಒಂದು ವೇಳೆ ಟ್ರಾಂಪ್ ಅಧಿಕಾರಕ್ಕೆ ಬಂದರೆ ಎಲೋನ್ ಮಸ್ಕ್ ಅವರು ಕ್ಯಾಬಿನೆಟ್ ನಲ್ಲಿ ಪ್ರಮುಖ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

ಈ ವರೆಗೆ ನಡೆದಿರುವ ಸಮೀಕ್ಷೆಯ ಪ್ರಕಾರ ಅಮೆರಿಕಾದ ಮುಂದಿನ ಅಧ್ಯಕ್ಷರಾಗಿ ಓರ್ವ ಮಹಿಳೆ ಆಯ್ಕೆಯಾಗುತ್ತಾರೆ ಎಂದು ಹೇಳಲಾಗಿದೆ. ಕಮಲ ಹಾರೀಸ್ ಅವರಿಗೆ ಅಮೆರಿಕದ ಅಧ್ಯಕ್ಷರಾಗುವ ಎಲ್ಲಾ ಅವಕಾಶಗಳು ಇವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದೆ ವೇಳೆ ಇಸ್ರೇಲ್ ಪರ ಬ್ಯಾಟಿಂಗ್ ಬೀಸುತ್ತಿರುವ ಟ್ರಂಪ್ ಅವರು ಇರಾನ್ ನ ಅಣುಸ್ಥಾವರದ ಮೇಲೆ ಇಸ್ರೇಲ್ ದಾಳಿ ಮಾಡುವುದಕ್ಕೆ ತನ್ನ ಬೆಂಬಲ ಇದೆ ಎಂದು ಹೇಳಿದ್ದಾರೆ.